ಯಾದಗಿರಿ | ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಭೀಮಣ್ಣ ಅವರ ಕುಟುಂಬಕ್ಕೆ ಪರಿಹಾರ ವಿತರಣೆ
Update: 2025-07-12 22:24 IST
ಸುರಪುರ: ಕಳೆದ ಕೆಲ ದಿನಗಳ ಹಿಂದೆ ವಿದ್ಯುತ್ ಶಾಕ್‌ನಿಂದಾಗಿ ಮೃತಪಟ್ಟ ತಾಲೂಕಿನ ಮಂಜಲಾಪುರ ಗ್ರಾಮದ ಭೀಮಣ್ಣ ಒನಕೇರಪ್ಪ ದೇವಡಿ ಕುಟುಂಬಕ್ಕೆ ಸರಕಾರದಿಂದ ಮಂಜೂರಾದ 5 ಲಕ್ಷ ರೂ.ಗಳ ಪರಿಹಾರ ಧನದ ಚೆಕ್ ಅನ್ನು ಶಾಸಕ ರಾಜಾ ವೇಣುಗೋಪಾಲ ನಾಯಕ ವಿತರಿಸಿದರು.
ಈ ಸಮಯದಲ್ಲಿ ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ವಿಠ್ಠಲ ಯಾದವ, ಕೆ.ಪಿ.ಸಿ.ಸಿ ಸದಸ್ಯರಾದ ಗುಂಡಪ್ಪ ಸೊಲ್ಲಾಪುರ, ನಗರಸಭೆ ಉಪಾಧ್ಯಕ್ಷ ರಾಜಾ ಪಿಡ್ಡ ನಾಯಕ(ತಾತಾ), ಮುದಿನಿಂಗಪ್ಪ, ಹೈಯಾಳಪ್ಪ, ವೀರಮಲ್ಲಪ್ಪ, ನರಸಪ್ಪ ದೇವಡಿ ಜೆಸ್ಕಾಂ ಎಇಇ ರಫೀಕ್ ಸೇರಿದಂತೆ ಇತರರಿದ್ದರು.