×
Ad

ಯಾದಗಿರಿ | ಕೊಳ್ಳುರ್ ಎಂ. ಸೇತುವೆಗೆ ಜಿಲ್ಲಾಧಿಕಾರಿಗಳಿಂದ ಭೇಟಿ, ಪರಿಶೀಲನೆ

Update: 2025-08-20 18:38 IST

ಯಾದಗಿರಿ: ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಅವರು ಇಂದು ಕೊಳ್ಳುರ್ ಎಂ. ಸೇತುವೆಗೆ ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಕೃಷ್ಣಾ ನದಿ ಹೊರಹರಿವು 2.60,285 ಕ್ಯೂಸೆಕ್ಸ್ ಇದ್ದು, ನದಿ ಪಾತ್ರದ ಗ್ರಾಮಗಳ ಜನರು ತಮ್ಮ ಜಾನುವಾರುಗಳೊಂದಿಗೆ ನದಿಗೆ ತೆರಳದಂತೆ ತಿಳಿಸಿದರು ಹಾಗೂ ಅಧಿಕಾರಿಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ನದಿ ಪಾತ್ರಕ್ಕೆ ಸಾರ್ವಜನಿಕರು ತೆರಳದಂತೆ ಅರಿವು ಮೂಡಿಸಲು ಸೂಚಿಸಿದರು.

ನಂತರ ಕೊಳ್ಳುರ್‌, ಮರಕಲ್ ಹಾಗೂ ಹತ್ತಿಗೂಡುರ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ಭಾರಿ ಮಳೆಯಿಂದ ಬೆಳೆ ಹಾನಿಯಾಗಿರುವ ಜಮೀನುಗಳನ್ನು ವೀಕ್ಷಣೆ ಮಾಡಿ, ಬೆಳೆ ಹಾನಿ ಸಮೀಕ್ಷೆ ಕೈಗೊಂಡು ಜಂಟಿಯಾಗಿ ಹಾನಿಯ ವಿವರ ಸಲ್ಲಿಸುವಂತೆ ಕೃಷಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News