ಯಾದಗಿರಿ | ರಕ್ತ ದಾನ ಮಾಡಿ ಜೀವ ಉಳಿಸಿ : ಸುದರ್ಶನ ನಾಯಕ
ಯಾದಗಿರಿ : ರಕ್ತದಾನ ಮಹಾದಾನ. ಇದರಿಂದ ಹಲವಾರು ಜೀವಗಳು ಉಳಿಯುತ್ತವೆ ಎಂದು ಜಿಲ್ಲಾ ಸಿವಿಲ್ ಗುತ್ತಿಗೆದಾರ ಸಂಘದ ಜಿಲ್ಲಾ ಅಧ್ಯಕ್ಷ ಸುದರ್ಶನ ನಾಯಕ ಹೇಳಿದರು.
ಕಲ್ಯಾಣ ಕರ್ನಾಟಕ ಟಿಪ್ಪರ್ ಚಾಲಕರ ಸಂಘದ ಜಿಲ್ಲಾ ಘಟಕ ವತಿಯಿಂದ ಕಾರ್ಮಿಕರ ದಿನಾಚರಣೆಯ ಅಂಗವಾಗಿ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ ರಕ್ತದಾನ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಜಿಲ್ಲಾಧ್ಯಕ್ಷ ಯಲ್ಲಪ್ಪ ಮನಗನಾಳ ಮಾತನಾಡಿ, ರಕ್ತದಾನ ಶ್ರೇಷ್ಠವಾದ ದಾನವಾಗಿದೆ. ಇದೊಂದು ಮಹಾತ್ಕಾರ್ಯವಾಗಿದೆ ಎಂದು ಹೇಳಿದರು.
ಸಂಘದ ಗೌರವಾಧ್ಯಕ್ಷ ಮುಹಮ್ಮದ್ ಆಜಂಪೀರ್ ತಡಿಬಿಡಿ ಮಾತನಾಡಿ, ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ರೋಗಿಯ ಜೀವ ಉಳಿಸಬೇಕು ಎಂದು ತಿಳಿಸಿದರು.
ತಮ್ಮರೆಡ್ಡಿಗೌಡ, ಮಹಿಬೂಬ್ ಮುಂಡರಗಿ, ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ನಾಟೆಕಾರ್, ರಕ್ತ ನಿಧಿ ಸಂಗ್ರಹ ಕೇಂದ್ರ ಮುಖ್ಯಸ್ಥ ಡಾ, ಸಿದ್ದಲಿಂಗರಡ್ಡಿ, ಬಾಬು ಇಬ್ರಾಹಿಂಪೂರ ಎಕ್ಬಾಲ್ ಯಾದಗಿರಿ, ಆರಿಫ್, ಶಿವರೆಡ್ಡಿ ಮಾಸ್ಕನಳ್ಳಿ,ಅಶೋಕ್ ಗೌಡ, ಮಹೇಶ್ ಮನಗನಾಳ್, ಸಿದ್ದು ವಡ್ನಳ್ಳಿ ಭೀಮು ಮನಗನಾಳ್, ದಂಡಪ್ಪ ಮುಂಡರಗಿ, ತೊಲ್ಮಿಯಾ, ಮರಮಕಲ್, ನಿಂಗಣ್ಣ ಗೌಡ ಮನಗನಾಳ್, ಐಮದ್ ಪಟೇಲ್, ಇಸ್ಮಾಯಿಲ್, ಅರಕೇರಾ, ಮೆಡಿಕಲ್ ಸಿಬ್ಬಂದಿ ಇದ್ದರು.
ಸುಮಾರು 30 ರಿಂದ 40 ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಸಂಚಾಲಕ ಮಲ್ಲರೆಡ್ಡಿ ಪ್ರಾರ್ಥನೆ ಮಾಡಿದರು. ಗುರುಪ್ರಸಾದ್ ವೈದ್ಯ ಸ್ವಾಗತಿಸಿ ವಂದಿಸಿದರು.