×
Ad

ಯಾದಗಿರಿ | ಸರಕಾರ ರೈತರ ಹಿತ ಕಾಪಾಡಲಿದೆ : ಡಾ.ಭೀಮಣ್ಣ ಮೇಟಿ

Update: 2025-04-03 17:54 IST

ಯಾದಗಿರಿ : ರಾಜ್ಯ ಸರಕಾರ ಜಿಲ್ಲೆಯ ರೈತರ ಹಿತವನ್ನು ಸಂಪೂರ್ಣವಾಗಿ ಕಾಪಾಡಲಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಡಾ.ಭೀಮಣ್ಣ ಮೇಟಿ ಹೇಳಿದರು.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾರಾಯಣಪುರ ಜಲಾಶಯದಿಂದ ನೀರು ಕಾಲುವೆಗಳಿಗೆ ಹರಿಸುವಂತೆ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೂ ತರಲಾಗಿದೆ. ರೈತರಿಗೆ ತೊಂದರೆಯಾಗದಂತೆ ಅಗತ್ಯವಾದ ಕ್ರಮವನ್ನು ಸಿಎಂ ಅವರು ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಜಲಾಶಯದ ಅಚ್ಚುಕಟ್ಟು ಪ್ರದೇಶದಲ್ಲಿ ರೈತರು ಬೆಳೆದಿರುವ ಬೆಳೆಗಳನ್ನು ಸಂರಕ್ಷಣೆ ಮಾಡಲು ನೀರು ಬಿಡುವಂತೆ ಸರಕಾರದ ಗಮನಕ್ಕೂ ಸಹ ತರಲಾಗಿದೆ. ಯಾವುದೇ ಕಾರಣಕ್ಕೂ ಅನ್ನದಾತರು ಎದೆಗುಂದಬಾರದು ನಿಮ್ಮೊಂದಿಗೆ ಸರಕಾರ ಇದೆ ಎಂದು ಹೇಳಿದರು.

ಕೊನೆಯ ಭಾಗದ ವಡಗೇರಾ ತಾಲ್ಲೂಕಿನ ರೈತರಿಗೂ ಸಹ ನೀರು ಹರಿಸಲಾಗುವುದು. ಹೀಗಾಗಿಯೇ ಇದನ್ನು ರಾಜ್ಯ ಸರಕಾರ ಗಂಭೀರವಾಗಿ ಪರಿಗಣಿಸಿದೆ. ರೈತರ ಹಿತಕ್ಕಾಗಿ ಸರಕಾರ ಸದಾ ಶ್ರಮಿಸುತ್ತಿದೆ ಎಂದು ತಿಳಿಸಿದರು.

ನೀರು ಹರಿಸುವ ವಿಷಯದಲ್ಲಿ ಕೆಲವರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ರೈತರನ್ನು ತಪ್ಪು ದಾರಿಗೆ ಎಳೆಯುವಂತಹ ಕೆಲಸ ಬಿಜೆಪಿ ಮಾಡುತ್ತಿದೆ. ಇದಕ್ಕೆ ರೈತರು ಯಾವುದೇ ಕಾರಣಕ್ಕೂ ಕಿವಿಗೊಡಬಾರದು. ಕಾಂಗ್ರೆಸ್ ನಿಮ್ಮೊಂದಿಗೆ ಇರಲಿದೆ ಎಂದು ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News