ಯಾದಗಿರಿ | ಧಾರಕಾರ ಮಳೆ : ಸೂಕ್ತ ಪರಿಹಾರಕ್ಕೆ ಉಮೇಶ ಕೆ.ಮುದ್ನಾಳ ಆಗ್ರಹ
ಯಾದಗಿರಿ : ಜಿಲ್ಲಾದ್ಯಂತ ಮಧ್ಯರಾತ್ರಿ ಸುರಿದ ಧಾರಕರ ಮಳೆಯಿಂದ ಸೇತುವೆಗಳು ಜಾಲಾವೃತಗೊಂಡು ಜನ ಜಾನುವಾರು ಪರದಾಡುವಸ್ಥಿತಿ ನಿರ್ಮಾಣವಾಗಿದೆ ಮತ್ತು ಸೇತುವೆ ಹಳ್ಳ ಕೊಳ್ಳಗಳು ಮೇಲದರ್ಜೆಗೆ ಏರಿಸಿ, ಕೇಂದ್ರ, ರಾಜ್ಯ ಸರಕಾರ ರೈತರಿಗೆ ಸೂಕ್ತ ಬೆಳೆ ಪರಿಹಾರ ನೀಡಬೇಕು ಎಂದು ಉಮೇಶ ಕೆ. ಮುದ್ನಾಳ ಆಗ್ರಹಿಸಿದ್ದಾರೆ.
ಜಿಲ್ಲಾಧ್ಯಂತ ರೈತರು ಬೆಳೆದ ಬೆಳೆಯೆಲ್ಲಾ ಮಧ್ಯರಾತ್ರಿ ಸುರಿದ ಮಳೆಯಿಂದ ಹಾಳಾಗಿದೆ. ಯಾದಗಿರಿ ತಾಲೂಕಿನ ಚಾಮನಹಳ್ಳಿ ಬಾಚವಾರ ಯರಗೋಳ ಗ್ರಾಮಗಳಲ್ಲಿ ಸೇತುವೆ ಜಲಾವೃತಿಯಾಗಿದೆ. ಪ್ರತಿವರ್ಷ ಮಳೆ ಬಂದರೇ ಸಾಕು ಮನೆಗಳಿಗೆ ನೀರು ನುಗ್ಗಿ ಜನ ಜಾನುವಾರಗಳು ಸೇತುವೆ ಮೇಲೆ ತಿರುಗಾಡದ ಪರಸ್ಥಿತಿ ನಿರ್ಮಾಣವಾಗಿದೆ ಎಂದರು.
ಸರ್ಕಾರ ಹಾಗೂ ಜಿಲ್ಲಾಡಳಿತ ಮುತುವರ್ಜಿಯಿಂದ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಒತ್ತಾಯಿಸಿದರು.
ಚಾಮನಹಳ್ಳಿ ಬಾಚವಾರ ಯರಗೋಳ ಗ್ರಾಮಗಳಲ್ಲಿ 15 ದಿನಗಳಲ್ಲೆ ಮೂರು ಭಾರಿ ಸೇತುವೆ ಜಲಾವೃತಿಯಾಗಿ ಸಾರ್ವಜನಿಕರ ಸಂಚಾರ ಸಂಪೂರ್ಣ ಬಂದಾಗಿದ್ದು, ಅತಿ ಶೀಘ್ರದಲ್ಲೆ ಸೇತುವೆಯನ್ನು ಮೇಲದರ್ಜೆಗೆ ಏರಿಸಿ ಶಾಶ್ವತ ಪರಿಹಾರಕ್ಕೆ ಮುಂದಾಗಬೇಕು.
-ಉಮೇಶ್ ಕೆ.ಮದ್ನಾಳ್, ಸಾಮಾಜಿಕ ಹೋರಾಟಗಾರ