×
Ad

ಯಾದಗಿರಿ | ಜಿಲ್ಲೆಯ ಸಹಕಾರಿ ವಲಯಕ್ಕೆ ಹೊಟ್ಟಿಯವರು ಕಳಸಪ್ರಾಯ : ವಿಶ್ವನಾಥರೆಡ್ಡಿ ದರ್ಶನಾಪುರ

Update: 2025-08-15 19:17 IST

ಯಾದಗಿರಿ: ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ ದೆಹಲಿಯ ನೂತನವಾಗಿ ನಿರ್ದೇಶಕರಾಗಿ ಆಯ್ಕೆಯಾದ ಸಿದ್ದಪ್ಪ ಎಸ್ ಹೊಟ್ಟಿ ಅವರಿಗೆ ಹೊಟ್ಟಿಯ ಆತ್ಮೀಯ ಬಳಗದ ವತಿಯಿಂದ ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಲಯದಲ್ಲಿ ಇಂದು ಸನ್ಮಾನಿಸಲಾಯಿತು.

ಸನ್ಮಾನ ನೇರವೆರಿಸಿ ಮಾತನಾಡಿದ ಸಹಕಾರ ಯೂನಿಯನ್ ಅಧ್ಯಕ್ಷ ವಿಶ್ವನಾಥರೆಡ್ಡಿ ದರ್ಶನಪೂರ ಅವರು, ಗಿರಿ ಜಿಲ್ಲೆಯ ಸಹಕಾರ ಸಂಘದಲ್ಲಿ ಗುರುತಿಸಿಕೊಂಡಿದ್ದ ಸಿದ್ದಪ್ಪ ಹೊಟ್ಟಿ ದೇಶದ ದೆಹಲಿಯಲ್ಲಿರುವ ನೆಪೆಡ್ ಸಂಸ್ಥೆಯ ಉಪಾಧ್ಯಕ್ಷರಾಗಿ ಹಾಗೂ ರಾಷ್ಟ್ರೀಯ ತೋಟಗಾರಿಕೆ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆಯ ನಿರ್ದೇಶಕರಾಗಿ ಆಯ್ಕೆಯಾಗಿದ್ದು, ನಮ್ಮ ಹಿಂದುಳಿದ ಯಾದಗಿರಿ ಜಿಲ್ಲೆಗೆ ಹೆಮ್ಮೆಯ ಸಂಗತಿ ಎಂದು ಹೇಳಿದರು.

ಸಹಕಾರ ಯುನಿಯನ್ ನಿರ್ದೇಶಕ ಕೆಂಚಪ್ಪ ನಗನೂರ, ಸಿದ್ದಪ್ಪ ಎಸ್.ಹೊಟ್ಟಿ ಮಾತನಾಡಿದರು.

ಈ ಸಂದರ್ಭದಲ್ಲಿ ಕಲಬುರಗಿ ಹಾಗೂ ಯಾದಗಿರಿ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕರಾದ ಪವನ ಕುಮಾರ, ಅಯ್ಯಣ್ಣ ಹುಂಡೇಕಾರ, ಪ್ರಕಾಶ ಅಂಗಡಿ ಕನ್ನೆಳ್ಳಿ, ಆರ್ ಮಾಹದೇವಪ್ಪಗೌಡ ಅಬ್ಬೆತುಮಕುರ, ಬಸವಂತ್ರಾಯ ಮಾಲಿಪಾಟೀಲ್, ಬಸವರಾಜ ಮೊಟ್ನಳ್ಳಿ, ಡಾ. ಭೀಮರಾಯ ಲಿಂಗೇರಿ, ಡಾ. ಎಸ್ ಎಸ್ ನಾಯಕ, ಚೆನ್ನಪ್ಪ ಠಾಣಗುಂದಿ, ಸೂಗಪ್ಪ ಪಾಟೀಲ್, ಅಮರಣ್ಣಗೌಡ ಗಡ್ಡೆಸೂಗೂರು, ವೈಜನಾಥ ತುಮಕೂರು, ನಾಗೇಂದ್ರ ಜಾಜಿ, ವಿ ಎಸ್ ಜಾಕಾಮಠ, ವೀರಭದ್ರಯ್ಯ ಮೋಟಾರ, ಶರಣಪ್ಪ ಗುಳಗಿ, ನಾಗಪ್ಪ ಸಜ್ಜನ, ಮಲ್ಲಿನಾಥ ಆಯರಕರ್, ಶೇಖರ ಅರಳಿ, ಲಕ್ಮೀನಾರಯಣ, ಅಯ್ಯಣ್ಣ ಗೌಡ ಕ್ಯಾಸಪನಳ್ಳಿ, ದೇವರಾಜ ವರ್ಕನಳ್ಳಿ, ಸುಜಾತ ಮಠ, ರೇಖಾ ಮ್ಯಾಗೇರಿ, ಮಲ್ಲು ಸ್ವಾಮಿ, ಸಿದ್ದಪ್ಪ ಹೊಟ್ಟಿಯ ಆತ್ಮೀಯ ಬಳಗದಿಂದ ಹಾಗೂ ಜಿಲ್ಲಾ ಸಹಕಾರ ಒಕ್ಕೂಟದ ವತಿಯಿಂದ ಸನ್ಮಾನಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News