ಯಾದಗಿರಿ | ಯಕ್ಷಿಂತಿ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರಿಂದ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ
Update: 2025-05-01 20:29 IST
ವಡಗೇರ : ತಾಲೂಕಿನ ಹಯ್ಯಾಳ ಬಿ ಗ್ರಾಮ ಪಂಚಾಯತ್ ಯಕ್ಷಿಂತಿ ಗ್ರಾಮದಲ್ಲಿ ನರೇಗಾ ಕೂಲಿಕಾರ್ಮಿಕರಿಂದ ನರೇಗಾ ಕಾಮಗಾರಿ ಸ್ಥಳದಲ್ಲಿ ಅಧಿಕಾರಿಗಳು ಹಾಗೂ ಕೂಲಿಕಾರ್ಮಿಕರು ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ ಆಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡ ಮಾತನಾಡಿದ ವಡಗೇರ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಿಕಾರ್ಜುನ ಸಂಗ್ವಾರ ಅವರು ನರೇಗಾ ಕೂಲಿಕಾರ್ಮಿಕರಿಗೆ ಸನ್ಮಾನಿಸಿ ಸಿಹಿ ತಿನಿಸಿ ಮಾತನಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಹಾದೇವಣ್ಣ ಪೂಜಾರಿ, ಭಾಸ್ಕರ್ ರಾವ್ ಕುಲಕರ್ಣಿ, ಸಿದ್ದಣ್ಣ, ಈರಣ್ಣ, ಸಾಹುಕಾರ ಕಾಮಣ್ಣ, ನಾಗರಾಳ ಶರೀಫ್, ಬೆಳಗೆರಿ ಗ್ರಾಮ ಪಂಚಾಯಿತಿ ಸದಸ್ಯರಾದ ಅಯ್ಯಪ್ಪ ಹೊರಪೆಟ ಹಣಮಂತ ಕಡಿಮನಿ ಹಾಗೂ ಗ್ರಾಮದ ಹಿರಿಯ ಮುಖಂಡರು, ಮಹಿಳೆಯರು ಇದ್ದರು. ನಿಂಗಣ್ಣ ಕರಡಿ ನಿರೂಪಿಸಿದರು.