ಯಾದಗಿರಿ | ತಂಗಡಗಿಯಲ್ಲಿ ಮಲ್ಲಿಕಾರ್ಜುನ ದೇವರ ಪಲ್ಲಕ್ಕಿ ಉತ್ಸವ
ಯಾದಗಿರಿ: ತಾಲೂಕಿನ ತಂಗಡಗಿ ಗ್ರಾಮದ ಆರಾಧ್ಯ ದೇವರಾದ ಮಲ್ಲಿಕಾರ್ಜುನ ಮೂರ್ತಿಯ ಪಲ್ಲಕ್ಕಿ ಉತ್ಸವ ಸೋಮವಾರ ಅದ್ದೂರಿಯಾಗಿ ಜರುಗುವ ಮೂಲಕ ಮೂಲ ಗದ್ದುಗೆಯಲ್ಲಿ ಕೂಡಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಭಾಗವಹಿಸಿ ಮಾತನಾಡಿ, ಅತಿ ಪುರಾತನವಾದ ಈ ದೇಗುಲದಲ್ಲಿ ಶ್ರೀಶೈಲ್ ಮಲ್ಲಿಕಾರ್ಜುನ ದೇವಾಲಯದಂತೆಯೇ ಉದ್ದವ ಲಿಂಗವು ಇಲ್ಲಿ ಉದ್ಬವಿಸಿದ್ದರಿಂದ ಎರಡನೇ ಶ್ರೀಶೈಲ್ ಎಂದೇ ಭಕ್ತರ ನಂಬಿಕೆ ಇದೆ ಎಂದರು.
ಇಂತಹ ದೇವಸ್ಥಾನದ ಮಲ್ಲಿಕಾರ್ಜುನ ಮೂರ್ತಿಯನ್ನು ಶ್ರಾವಣ ಮಾಸದ ಅಂಗವಾಗಿ ಪಕ್ಕದ ಗುರುಸುಣಗಿ ಗ್ರಾಮದ ಸಿದ್ದಲಿಂಗೇಶ್ವರ ದೇವಸ್ಥಾನದಲ್ಲಿ ಕೂಡಿಸಿ ತಿಂಗಳಕಾಲ ಪಾದಪೂಜೆ, ವಿಶೇಷ ಪೂಜೆ, ಅಭಿಷೇಕ ಕಾರ್ಯಕ್ರಮದ ಸಂಪ್ರದಾಯ ಮೊದಲಿನಿಂದಲ್ಲೂ ಬಂದಿದೆ ಎಂದು ಹೇಳಿದರು.
ದೇವಾಲಯದ ಅರ್ಚಕ ಶರಣಪ್ಪ ಪುಜಾರಿ ಮಾತನಾಡಿದರು.
ಈ ವೇಳೆ ಗ್ರಾಮಸ್ಥರಾದ ಗ್ರಾಮದ ಹಿರಿಯರಾದ ಹೊಸಮನಿ ಪರ್ವತರೆಡ್ಡಿ, ಮಾಲಿಗೌಡ ಶರಣಗೌಡ, ಮಲ್ಲಣ್ಣಗೌಡ, ಬೋಳಾರಿ ಮಲ್ಲಣ್ಣಗೌಡ, ಶಿವರಾಜಪ್ಪಗೌಡ, ಗ್ರಾಮ ಎಲ್ಲಾ ಸಮಾಜದ ಹಿರಿಯ ಮುಖಂಡರು ಭಾಗವಹಿಸಿದ್ದರು.