×
Ad

ಯಾದಗಿರಿ | ಬಿಡಾಡಿ ದನಗಳ ಹಾವಳಿ ತಡೆಯುವಂತೆ ನಗರಸಭಾ ಸದಸ್ಯೆ ಸುವರ್ಣ ಎಲಿಗಾರ ಒತ್ತಾಯ

Update: 2025-06-19 20:24 IST

ಯಾದಗಿರಿ: ನಗರದಾದ್ಯಂತ ಅನೇಕ ಕಡೆಗಳಲ್ಲಿ ನಿತ್ಯವು ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದ್ದು ಇದರಿಂದ ಸಾರ್ವಜನಿಕರು ನಿತ್ಯವು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ಆದ್ದರಿಂದ ಕೂಡಲೇ ಬಿಡಾಡಿ ದನಗಳ ಹಾವಳಿಯನ್ನು ತಡೆಯಬೇಕು ಎಂದು ನಗರಸಭೆ ಸದಸ್ಯೆ ಸುವರ್ಣ ಸಿದ್ರಾಮ ಎಲಿಗಾರ ಒತ್ತಾಯಿಸಿದ್ದಾರೆ.

ಈ ಕುರಿತು ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆದಿರುವ ಸುವರ್ಣ ಸಿದ್ರಾಮ, ನಗರದ ಅನೇಕ ಕಡೆಗಳಲ್ಲಿ ರಸ್ತೆಗಳಲ್ಲಿ ಅಡ್ಡಲಾಗಿ ದನಗಳು ಮಲಗುವುದರಿಂದ ವಾಹನಗಳ ಓಡಾಟಕ್ಕೆ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಕೂಡಲೇ ನಗರದಲ್ಲಿ ಬಿಡಾಡಿ ದನಗಳ ಹಾವಳಿಯನ್ನು ತಡೆಯಬೇಕು ಎಂದು ಆಗ್ರಹಿಸಿದ್ದಾರೆ.   


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News