×
Ad

ಯಾದಗಿರಿ | ನೀಲಿ ಧ್ವಜ ತೆರವು ಖಂಡಿಸಿ ಜು.25 ರಂದು ಹೋರಾಟ

Update: 2025-07-23 21:45 IST

ಸುರಪುರ: ನಗರದ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಹಿಂಭಾಗದ ಮೈದಾನದಲ್ಲಿ ಹಾಕಲಾಗಿದ್ದ ನೀಲಿ ಧ್ವಜಗಳನ್ನು ತೆರವುಗೊಳಿಸಿರುವ ಘಟನೆ ಖಂಡಿಸಿ ಹೋರಾಟ ರೂಪಿಸಲು ದಲಿತ ಸಾಮೂಹಿಕ ಸಂಘಟನೆಗಳ ಮುಖಂಡರು ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಬಳಿ ಪೂರ್ವಭಾವಿ ಸಭೆ ನಡೆಸಿದರು.

ಸಭೆಯ ಕುರಿತು ಮುಖಂಡರು ಮಾತನಾಡಿ, ಕೇಂದ್ರ ಬಸ್‌ ನಿಲ್ದಾಣ ಝಂಡದಕೇರಿ ರಸ್ತೆ ಯಲ್ಲಿರುವ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಅಶೋಕ ದ್ವಜ ಕಂಬಗಳಿಗಿದ್ದ ಅಶೋಕ ಚಕ್ರ ನೀಲಿದ್ವಜಗಳನ್ನು ತೆರುವು ಮಾಡಿರುವ ಘಟನೆಗೆ ಸಂಭಂದಿಸಿದ ಸುರಪೊರ ಪೋಲೀಸ್ ಠಾಣೆಯಲ್ಲಿ ದಾಖಲಿಸಿದ ಪ್ರಕರಣಕ್ಕೆ ಜು.9 ರಂದು ಸುಳ್ಳು ಕೌಂಟರ್ ಕೇಸ್ ದಾಖಲಾಗಿರುವದನ್ನು ರದ್ದುಗೋಳಿಸಬೇಕು ಮತ್ತು ಸುರಪುರ ಸರ್ವೇ ನಂ 7/1, 7/2 ಮತ್ತು 7/3 ಒಟ್ಟು 8 ಎಕರೆ 36 ಗುಂಟೆ ಸರ್ಕಾರಿ ಖಾರಿಜ್ ಖಾತಾ ಭೂಮಿಯಲ್ಲಿ ಎಚ್.ಕೆ.ಇ ಸೋಸಾಯಿಟಿ ಹೆಸರಲ್ಲಿ 6 ಎಕರೆ 10 ಗುಂಟೆ ಭೂಮಿಯನ್ನು ಮಂಜೂರಿ ಮಾಡಲಾಗಿದೆ. ಸರ್ವೆ ನಂ 7/1 ರಲ್ಲಿ 2 ಎಕರೆ 28 ಗುಂಟೆ ಉಳಿದ ಜಾಗವನ್ನು ಒತ್ತುವರಿಯಾಗಿರುವದನ್ನು ಸರ್ಕಾರದ ವತಿಯಿಂದ ಸರ್ವೇ ಮಾಡಿ ಸದರಿ ಜಾಗದಲ್ಲಿಯೇ ಡಾ. ಅಂಬೇಡ್ಕರ್ ಪುತ್ಥಳಿಯ ಸುತ್ತ ಮುತ್ತ ಇರುವ ಜಾಗವನ್ನು ಡಾ. ಅಂಬೇಡ್ಕರ್ ಹೆಸರಲ್ಲಿ ಉದ್ಯಾನವನ, ಸಾಂಸ್ಕೃತಿಕ ಭವನ, ಮತ್ತು ಗ್ರಂಥಾಲಯವನ್ನು ನಿರ್ಮಾಣ ಮಾಡಿ ದಲಿತ ಜನರ ಅಭಿವೃದ್ಧಿಗೊಸ್ಕರ ಜಿಲ್ಲಾಡಳಿತ ಮತ್ತು ಸುರಪುರ ತಾಲೂಕಾಡಳಿತ 2 ಎಕರೆ 28 ಗುಂಟೆ ಭೂಮಿಯನ್ನು ಮಂಜೂರು ಮಾಡಬೇಕು ಎಂದು ತಿಳಿಸಿದರು.

ಅನಧಿಕೃತವಾಗಿ ಎಚ್ ಕೆ ಇ ಸೋಸಾಯಿಟಿ ಹೆಸರಲ್ಲಿ ಕೆಂಭಾವಿ ಮಾರ್ಗದಲ್ಲಿರುವ ದರ್ಗಾ ಮತ್ತು ಸಾರ್ವಜನಿಕ ಬಾವಿಯನ್ನು ಹೊರತುಪಡಿಸಿ ಉಳಿದ ಎಲ್ಲ ಅಂಗಡಿಗಳನ್ನು ತೆರುವುಗೊಳಿಸಬೇಕು ಮತ್ತು ಜು.19 ರಂದು ದಲಿತರ ಮೆಲೆ ದಾಖಲಾದ ಸುಳ್ಳು ಕೇಸನ್ನು ರದ್ದುಪಡಿಸಬೇಕು ಹಾಗೂ ಇದಕ್ಕೆ ನೇರವಾಗಿ ಕುಮ್ಮಕ್ಕು ನೀಡಿರುವ ಪೋಲಿಸ್ ಆರಕ್ಷಕ ನಿರೀಕ್ಷರನ್ನು ವರ್ಗಾವಣೆಮಾಡಬೇಕು ಎಂದು ಒತ್ತಾಯಿಸಿದರು.

ನಮ್ಮ ಎಲ್ಲಾ ಬೇಡಿಕೆಗಳನ್ನು ಈಡೇರಿಸಲೂ ಒತ್ತಾಯಿಸಿ ಜು.25 ರಂದು ತಾಲೂಕು ಧಂಢಾಧಿಕಾರಿಗಳಿಗೆ ಮತ್ತು ಪೋಲೀಸ್ ಉಪ ಅಧೀಕ್ಷಕರಿಗೆ ಸಾಮೂಹಿಕವಾಗಿ ಮನವಿಯನ್ನು ಸಲ್ಲಿಸಲು ತಿರ್ಮಾನಿಸಲಾಗಿದೆ ಎಂದು ತಿಳಿಸಿದ್ದಾರೆ.

ಪೂರ್ವಭಾವಿ ಸಭೆಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಮಲ್ಲಿಕಾರ್ಜುನ್ ಕ್ರಾಂತಿ, ನಾಗಣ್ಣ ಕಲ್ಲದೇವನಹಳ್ಳಿ, ಮಾನಪ್ಪ ಕಟ್ಟಿಮನಿ, ನಿವೃತ್ತ ಪ್ರೋ ಮಾನು ಗುರಿಕಾರ್, ವೆಂಕಟೇಶ್ ಹೊಸಮನಿ, ಶ್ರೀನಿವಾಸ ನಾಯಕ ಬೊಮ್ಮನಹಳ್ಳಿ, ಚಂದ್ರಶೆಖರ್ ಜಡಿಮರಳ, ಮಾನಪ್ಪ ಕರಡಕಲ, ರಾಹುಲ್ ಹುಲಿಮನಿ, ಮಾನಪ್ಪ ಬಿಜಾಸಪೂರ, ಚಂದ್ರಶೇಖರ್ ಕಟ್ಟಿಮನಿ, ಶಿವುಕುಮಾರ ಕಟ್ಟಿಮನಿ, ಆದಪ್ಪ ಸುರಪುರಕರ್, ವೆಂಕಟೆಶ ಸುರಪುರ, ಶಂಕ್ರಪ್ಪ ಶಾಖನವರ, ಹಣಮಂತ ಹೊಸಮನಿ, ನಿಂಗಣ್ಣ ದೇವರಗೋನಾಲ್, ಮೂರ್ತಿ ಬೊಮ್ಮನಹಳ್ಳಿ, ರಾಮಣ್ಣ ಶೆಳ್ಳಗಿ, ಶೆಖರ್ ಜೀವಣಗಿ, ಮಲ್ಲಿಕಾರ್ಜುನ್ ತಳ್ಳಳ್ಳಿ, ಶಿವಲಿಂಗ ಹಸನಾಪೂರ, ಶಂಕರ ಹೊಸಮನಿ,ಹಣಮಂತ ಭದ್ರಾವತಿ, ಶಿವಶಂಕರ ಯಾಳಗಿ, ಇತರರು ಬಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News