ಯಾದಗಿರಿ | ನ್ಯಾ.ನಾಗಮೋಹನ್ ದಾಸ್ ವರದಿ ತಿರಸ್ಕರಿಸಲು ಸರಕಾರಕ್ಕೆ ಬಲಗೈ ಸಮುದಾಯದಿಂದ ಒತ್ತಾಯ
ಯಾದಗಿರಿ: ಒಳ ಮೀಸಲಾತಿ ಕುರಿತಂತೆಯೇ ನ್ಯಾ.ನಾಗಮೋಹನ್ ದಾಸ್ ಅವರ ವರದಿ ಅವೈಜ್ಞಾನಿಕ, ಅಪೂರ್ಣ, ಮತ್ತು ದುರುದ್ದೇಶ ಪೂರಿತವಾಗಿದ್ದು, ಈ ವರದಿಯನ್ನು ಸರಕಾರ ತಿರಸ್ಕರಿಸಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸಬೇಕು ಎಂದು ಬಲಗೈ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿಯಿಂದ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಸುಭಾಷ್ ವೃತ್ತದವರೆಗೆ ಬೃಹತ್ ಪ್ರತಿಭಟನಾ ತಮಟೆ ಮೆರವಣಿಗೆ ಮೂಲಕ ಆಗಮಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿ ಸರಕಾರಕ್ಕೆ ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ದಲಿತ ಹಿರಿಯ ಮುಖಂಡ ಮರೆಪ್ಪ ಚಟ್ಟೇರಕರ್ ಅವರು, ನ್ಯಾ.ನಾಗಮೋಹನದಾಸ್ ಆಯೋಗವು ನೀಡಿರುವ ವರದಿ ತಡೆ ಹಿಡಿದು ತಕ್ಷಣ ಉಪಸಮಿತಿ ನೇಮಿಸುವ ಮೂಲಕ ಸ್ಪಷ್ಟ ಮತ್ತು ನ್ಯಾಯ ಸಮೃತವಾದ ವೈಜ್ಞಾನಿಕವಾಗಿ ವರದಿ ಸಿದ್ದಪಡಿಸಿ ಸಮಸ್ತ ಪರಿಶಿಷ್ಟ ಜಾತಿ ಬಲಗೈ ಸಮುದಾಯಕ್ಕೆ ನ್ಯಾಯ ಒದಗಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ದಲಿತ ಮುಖಂಡ ನೀಲಕಂಠ ಬಡಿಗೇರ ಮಾತನಾಡಿದರು.
ಈ ಸಂದರ್ಭದಲ್ಲಿ ಬಲಗೈ ಸಮುದಾಯಗಳ ಒಳ ಮೀಸಲಾತಿ ಹೋರಾಟ ಸಮಿತಿಯ ನಾಗಣ್ಣ ಬಡಿಗೇರ, ರಾಮಣ್ಣ ಸಾದ್ಯಾಪೂರ, ಶಿವುಪುತ್ರ ಜವಳಿ, ಮಹಾದೇವ ದಿಗ್ವಿ, ಗಾಳೆಪ್ಪ ಪೂಜಾರಿ, ಶ್ರೀಶೈಲ ಹೊಸ್ಮನಿ, ಮಲ್ಲಿಕಾರ್ಜುನ ಪೂಜಾರಿ, ರಾಯಪ್ಪ ಸಾಲಿಮನಿ, ಸೈದಪ್ಪ ಕೂಯಿಲೂರ್, ಮಲ್ಲಿಕಾರ್ಜುನ ಕುರಕುಂಬಳಕರ್, ಪ್ರಭು ಬುಕ್ಕಲ್, ಡಾ. ಭಗವಂತ ಅನವಾರ, ರಾಹುಲ್ ಹುಲಿಮನಿ, ಚಂದಪ್ಪ ಮುನಿಯಪ್ಪನೋರ್, ಶರಣು ಎಸ್ ನಾಟೇಕಾರ್, ಸಂತೋಷ ನಿರ್ಮಲಕರ್, ಕಾಶಿನಾಥ ನಾಟೇಕಾರ್, ಚಂದ್ರಕಾಂತ ಮುನಿಯಪ್ಪನೋರ, ಪರಶುರಾಮ ಒಡೆಯರ್, ನಿಂಗಣ್ಣ ಬೀರನಾಳ, ಸಂಪತ್ ಚಿನ್ನಾಕರ್, ವಸಂತ ಸುಂಗಲಕರ್, ಸೇರಿದಂತೆ ಅನೇಕ ದಲಿತ ಮುಖಂಡರು ಇದ್ದರು.