×
Ad

ಯಾದಗಿರಿ | ವಾರ್ಡ್‌ ನಂ.28ರಲ್ಲಿ 50 ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಚಾಲನೆ

Update: 2025-10-13 19:05 IST

ಯಾದಗಿರಿ : ರಸ್ತೆ ಕಾಮಗಾರಿ ಗುಣಮಟ್ಟದಲ್ಲಿ ಮಾಡುವ ಮೂಲಕ ಅನುದಾನದ ದುರ್ಬಳಕೆಯಾಗದಂತೆ ನೋಡಿಕೊಳ್ಳಿ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹೇಳಿದರು.

ನಗರದ ವಾರ್ಡ್‌ ನo.28 ರ ಮಸೀದಿ ಬಳಿ ಸಿಸಿ ರಸ್ತೆ ನಿರ್ಮಾಣಕ್ಕೆ 2024-25 ಸಾಲಿನಲ್ಲಿ ಕೆಕೆಆರ್ ಡಿಬಿ ಅನುದಾನದ 50 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಸೋಮವಾರ ಭೂಮಿ ಪೂಜೆ ನೆರವರಿಸಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಮಾತನಾಡಿದರು.

ಮಳೆಯಿಂದಾಗಿ ರಸ್ತೆಗಳು ಹಾನಿಯಾಗಿವೆ. ಜನರ ಸಂಚಾರಕ್ಕೆ ತೊಂದರೆಯಾಗಿದೆ. ಇದರಿಂದ ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಮುಗಿಸಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರಾದ ಜಯಮ್ಮ ಸುರೇಶ ಮಡ್ಡಿ, ನಗರ ಪ್ರಾದಿಕಾರದ ಸದಸ್ಯರಾದ ಮಂಜುನಾಥ ಮಡ್ಡಿ, ಕಲೀಮ್ ಜೈನಾ, ಜಿಲ್ಲಾ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಪದ್ಮಾವತಿ, ಅಲ್ಪಸಂಖ್ಯಾತ ತಾಲೂಕು ಘಟಕದ ಅಧ್ಯಕ್ಷ ಸಲೀಂ ಹುಂಡೇಕಾರ, ತಾಲೂಕು ಒಬಿಸಿ ಬ್ಲಾಕ್ ಅಧ್ಯಕ್ಷ ಸಾಬಣ್ಣ ಬಾಡಿಯಾಳ, ನರೇಂದ್ರ ಗುತ್ತೇದಾರ, ನಿವೃತ್ತ ಪ್ರಾಂಶುಪಾಲರಾದ ಅಶೋಕ ವಾಟ್ಕರ್, ಪ್ರಥಮ ದರ್ಜೆ ಗುತ್ತೇದಾರ ತಿಮ್ಮಣ್ಣ ನಾಯಕ, ಹಣಮಂತ ಮಡ್ಡಿ, ಶರಣಪ್ಪ ಪೂಜಾರಿ, ದೇವಪ್ಪ ಪೂಜಾರಿ , ಅಯ್ಯಪ್ಪ ಪೂಜಾರಿ, ಉಸ್ಮಾನ್ ಜೆಕೆಲ್, ಫಯಾಝ್‌ ಮುಲ್ಲಾ, ಇಮಾಮ್ ಚೌದ್ರಿ, ದೇವಪ್ಪ ಪೂಜಾರಿ, ರಾಮಣ್ಣ ಉಪ್ಪಾರ, ನಿರ್ಮಿತಿ ಕೇಂದ್ರದ ಅಧಿಕಾರಿಗಳಾದ ನಾಗೇಶ್ ಕುಲಕರ್ಣಿ, ರವಿ ಕಂದಕೂರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News