×
Ad

ಯಾದಗಿರಿ | ಐದು ಗ್ಯಾರಂಟಿಗಳ ಪೈಕಿ ಹೆಚ್ಚು ಜನಪ್ರಿಯಗೊಂಡದ್ದು ಶಕ್ತಿ ಯೋಜನೆ : ಸಿಇಓ ಲವೀಶ್ ಒರಡಿಯಾ

Update: 2025-07-14 16:53 IST

ಯಾದಗಿರಿ : ರಾಜ್ಯ ಸರ್ಕಾರದ ಮಹತ್ವದ ಐದು ಗ್ಯಾರಂಟಿಗಳ ಪೈಕಿ ಅತಿ ಹೆಚ್ಚು ಜನಪ್ರಿಯ ಯೋಜನೆ ಎಂದರೆ ಶಕ್ತಿ ಯೋಜನೆ ಎಂದು‌ ಜಿಲ್ಲಾ‌ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ ಓರಡಿಯಾ ಹೇಳಿದರು.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯಡಿ 500 ಕೋಟಿ ಮಹಿಳಾ ಪ್ರಯಾಣಿಕರು ಪ್ರಯಾಣ ಮಾಡಿದ ಸಂಭ್ರಮದ ಹಿನ್ನೆಯಲ್ಲಿ‌ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ಸೋಮವಾರ ಬಸ್ ಗೆ ಪೂಜೆ ಮಾಡಿ ಟಿಕೆಟ್ ವಿತರಣೆ ಮಾಡಿ ಮಾತನಾಡಿದರು.

ಈ ಯೋಜನೆಯಿಂದ ಲಕ್ಷಾಂತರ ಮಹಿಳೆಯರು ಸ್ವತಂತ್ರವಾಗಿ ರಾಜ್ಯದ ಎಲ್ಲಡೆ ಉಚಿತ ಪ್ರಯಾಣಿಸಲು ಅನುಕೂಲವಾಗಿದೆ. ದೇಶ ಸುತ್ತು , ಕೋಶ ಓದು ಎಂಬ ಹಿನ್ನಲೆಯಲ್ಲಿ ಮಹಿಳೆಯರು ರಾಜ್ಯ ಸುತ್ತಿ ನಮ್ಮ ಐತಿಹಾಸಿಕ ಪರಂಪರೆ, ಇತಿಹಾಸ, ಸಂಸ್ಕ್ರತಿ ನೋಡಿ ತಿಳಿದುಕೊಂಡಿದ್ದಾರೆಂದು ಸಂತಸ ವ್ಯಕ್ತಪಡಿಸಿದರು.

ಜಿಲ್ಲಾ‌ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶರಣಿಕ ಕುಮಾರ ದೋಖಾ ಮಾತನಾಡಿ, ಎರಡು ವರ್ಷದಲ್ಲಿ ನಮ್ಮ ಪಂಚ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜಾರಿ ಮಾಡಲಾಗಿದೆ ಎಂದರು.

ಈ‌ ಸಂದರ್ಭದಲ್ಲಿ ಬಸರೆಡ್ಡಿ ಅನಪೂರ್, ಮುಖಂಡರಾದ ಪಂಪನಗೌಡ, ಬಸ್ಸಗೌಡ ಬಿಳ್ಹಾರ್, ಚಿದಾನಂದಪ್ಪ‌ ಕಾಳೆಬೆಳಗುಂದಿ, ಜಿಲ್ಲಾ ಪಂಚಾಯತ ಕಾರ್ಯದರ್ಶಿ, ವಿಜಯಕುಮಾರ್ ಮಡ್ಡೆ, ವಿಭಾಗಿಯ ಸಂಚಾರಾಧಿಕಾರಿ ವಿ.ಆರ್ ರೆಡ್ಡಿ, ವಿಭಾಗೀಯ ತಾಂತ್ರಿಕ ಅಧಿಕಾರಿ ಪ್ರಶಾಂತ ಸುರಪುರಕರ್, ಘಟಕ ವ್ಯವಸ್ಥಾಪಕ ಶಂಶಾಕ‌ ಬಾಬು, ಯಾದಗಿರಿ ವಿಭಾಗದ ಸಾರಿಗೆ ನೌಕರರ ಸಂಘದ ಅಧ್ಯಕ್ಷ ದೇವಿಂದ್ರಪ್ಪ ಮ್ಯಾಗೇರಿ, ಶ್ಯಾಮಸನ್ ಮಾಳಿಕೇರಿ, ಯಾದಗಿರಿ ತಾಲೂಕಿನ ಶಕ್ತಿ ಯೋಜನೆ ತಾಲೂಕಿನ ಸದಸ್ಯರಾದ ಅರ್ಜುನ ಪವಾರ್, ಶಿವು ಕೊಲಿವಾಡ್, ಮಹೇಶ ಬೋಜ್ಜಿ, ಮಲ್ಲಿಕಾರ್ಜುನ ‌ಈಟೆ, ಮಹಿಳಾ ಮುಖಂಡರಾದ ನೀಲಾಫರ್ ಬಾದಲ್, ಪದ್ಮಾವತಿ ಜಿ, ಸಿದ್ದಲಿಂಗಮ್ಮ ದದ್ದಲ್‌, ಮಲ್ಲಮ್ಮ ಕೋಮಾರ್, ನೀಲಮ್ಮ ಮುಳಾಗಸಿ, ಚಂದ್ರಕಲಾ ‌ಮನಿಯಪ್ಪನೋರ್ ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News