×
Ad

ಯಾದಗಿರಿ: ತಹಸಿಲ್ದಾರ್ ಕಚೇರಿ ಮುಂದೆ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ಹೋರಾಟ

Update: 2025-07-27 20:16 IST

ಸುರಪುರ: ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿನ ಖಾರೀಜ್ ಖಾತಾ ಜಾಗದಲ್ಲಿ 4 ಎಕರೆ ಜಾಗವನ್ನು ವಾಲ್ಮೀಕಿ ಸಮುದಾಯಕ್ಕೆ ಮೀಸಲಿಡುವಂತೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ತಹಸಿಲ್ದಾರ್‌ಗೆ ಮನವಿ ಸಲ್ಲಿಸಲಾಗಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ವಾಲ್ಮೀಕಿ ಸಮುದಾಯ ತಾಲೂಕಿನಲ್ಲಿ ದೊಡ್ಡ ಸಮುದಾಯವಾಗಿದ್ದು, ಈ ಸಮುದಾಯ ಆರ್ಥಿಕವಾಗಿ,ಶೈಕ್ಷಣಿಕವಾಗಿ ಮತ್ತು ಔದ್ಯೋಗಿಕವಾಗಿ ಅಭಿವೃಧ್ಧಿ ಹೊಂದಲು ಗ್ರಂಥಾಲಯ ಸೇರಿದಂತೆ ಸಮುದಾಯ ಭವನ ಯಾವುದೂ ನಿರ್ಮಾಣಗೊಂಡಿಲ್ಲ.ಆದ್ದರಿಂದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಖಾರೀಜ್ ಖಾತಾ ಸರ್ವೇ ನಂಬರ್ 7/1 ರಲ್ಲಿ ಇರುವ 6 ಎಕರೆ 15 ಗುಂಟೆ ಜಮೀನಿನ ಪೈಕಿ ನಾಲ್ಕು ಎಕರೆ ಜಮೀನು ಮೀಸಲಿಟ್ಟು ನಮ್ಮ ಸಮಾಜಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.

ನಂತರ ತಹಸಿಲ್ದಾರ್ ಹುಸೇನಸಾಬ್ ಎ.ಸರಕಾವಸ್ ಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಸಂಘದ ತಾಲೂಕ ಗೌರವಾಧ್ಯಕ್ಷ ಸಿದ್ದನಗೌಡ ಕರಿಬಾವಿ,ತಾಲೂಕ ಅಧ್ಯಕ್ಷ ಭೀಮನಗೌಡ ಲಕ್ಷ್ಮಿ ತಾ.ಪ್ರ ಕಾರ್ಯದರ್ಶಿ ನಾಗರಾಜ ನಾಯಕ ಪ್ಯಾಪ್ಲಿ,ಶ್ರೀ ವಾಲ್ಮೀಕಿ ಇಂಟರ್ನ್ಯಾಷನಲ್ ಆರ್ಮಿ ಸಂಘಟನೆಯ ರಾಜ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ, ಮುಖಂಡರಾದ ಭೀಮು ಹೆಚ್.ನಾಯಕ,ವಿಜಯಕುಮಾರ ಚಿಟ್ಟಿ,ಬಲಭೀಮ ನಾಯಕ ಬೈರಿಮಡ್ಡಿ,ವಿನೋದ ಕುಮಾರ ನಾಯಕ,ವೆಂಕಟೇಶ ಬೇಟೆಗಾರ, ವಾಸುದೇವ ನಾಯಕ,ಶ್ರೀನಿವಾಸ ನಾಯಕ ಲಕ್ಷ್ಮಿಪುರ, ಮೌನೇಶ ನಾಯಕ ಚಿಕ್ಕನಹಳ್ಳಿ, ದೇವು ನಾಯಕ ಜಾಲಿಬೆಂಚಿ, ನಾಗರಾಜ ದೇವತ್ಕಲ್, ರಂಗನಾಥ ನಾಯಕ ಲಕ್ಷ್ಮಿಪುರ,ಶಿವರಾಜ ಪಾಟೀಲ, ವಿಜಯಗೌಡ ಬೇವಿನಾಳ, ಶರಣು ಮಕಾಶಿ, ದೇವರಾಜ ದಳವಾಯಿ, ಕನಕಾಚಲ ನಾಯಕ ಜಾಗೀರದಾರ,ಸಂಜೀವಪ್ಪ ನಾಯಕ,ಗೋಪಾಲ ನಾಯಕ ಸತ್ಯಂಪೇಟೆ,ಮಲ್ಲಣಗೌಡ ಮಾಲಿ ಪಾಟೀಲ್, ಪರಮಣ್ಣ ಕಕ್ಕೇರಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ವಾಲ್ಮೀಕಿ ಸಮುದಾಯಕ್ಕೆ ಸುರಪುರ ನಗರದ ಶ್ರೀ ಪ್ರಭು ಕಾಲೇಜ್ ಮೈದಾನದಲ್ಲಿನ ಸರ್ವೇ ನಂಬರ್ 7/1 ರಲ್ಲಿ 4 ಎಕರೆ ಜಮೀನು ಮೀಸಲಿಡುವಂತೆ ಆಗ್ರಹಿಸಿ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ನಗರಸಭೆ ಪೌರಾಯುಕ್ತರಿಗೆ ಮನವಿ ಸಲ್ಲಿಸಲಾಗಿದೆ.ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರು,ಉಪಾಧ್ಯಕ್ಷರು,ಪ್ರ.ಕಾರ್ಯದರ್ಶಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ನಗರದ ಡಾ.ಬಿ.ಆರ್ ಅಂಬೇಡ್ಕರ್ ವೃತ್ತದ ಹಿಂಬದಿಯ ಮೈದಾನದಲ್ಲಿ ಹಾಕಲಾಗಿರುವ ನೀಲಿ ಧ್ವಜದ ಸ್ಥಳದಲ್ಲಿ ಅಂಬೇಡ್ಕರ್ ಗ್ರಂಥಾಲಯ ಹಾಗೂ ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಎರಡು ಎಕರೆ ಜಾಗ ನೀಡುವಂತೆ ದಲಿತ ಸಾಮೂಹಿಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.

ಮತ್ತೊಂದೆಡೆ ತಾಲೂಕ ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘ ದಿಂದ ಸಮುದಾಯದ ಅಭಿವೃಧ್ಧಿಗಾಗಿ ಗ್ರಂಥಾಲಯ,ಸಮಯದಾಯ ಭವನ ನಿರ್ಮಾಣಕ್ಕಾಗಿ ಸರ್ವೇ ನಂಬರ್ 7/1ರ ಖಾರೀಜ್ ಖಾತಾ ಜಮೀನಿನಲ್ಲಿ 4 ಎಕರೆ ಜಮೀನು ನೀಡುವಂತೆ ಆಗ್ರಹಿಸಿ ಶ್ರೀ ಮಹರ್ಷಿ ವಾಲ್ಮೀಕಿ ಧ್ವಜವನ್ನು ಹಾಕಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News