ಯಾದಗಿರಿ | ಆಸ್ತಿಗಾಗಿ ಮಗನಿಂದಲೇ ತಂದೆಯ ಹತ್ಯೆ
Update: 2025-07-14 16:48 IST
ಸಾಂದರ್ಭಿಕ ಚಿತ್ರ
ಯಾದಗಿರಿ: ಆಸ್ತಿಗಾಗಿ ತಂದೆಯನ್ನೇ ಮಗನೊರ್ವ ಕೊಲೆ ಮಾಡಿರುವ ಘಟನೆ ಶಹಾಪುರ ತಾಲ್ಲೂಕಿನ ಮಡ್ನಾಳ ಕ್ಯಾಂಪ್ ಹತ್ತಿರ ಭಾನುವಾರ ನಡೆದಿದೆ.
ಮೃತರನ್ನು ಶಹಾಪುರ ನಗರದ ಹಳಿಸಗರದ ನಿವಾಸಿ ಯಂಕಪ್ಪ ಅಂಬಲಪ್ಪ ಮ್ಯಾಕಲದೊಡ್ಡಿ (65) ಹಾಗೂ ಆರೋಪಿಯನ್ನು ನಾಗಪ್ಪ ಯಂಕಪ್ಪ (29) ಎಂದು ಗುರುತಿಸಲಾಗಿದೆ.
ಭಾನುವಾರ ತಮ್ಮ ಹೊಲಕ್ಕೆ ಹಳಿಸಗರದಿಂದ ಯಂಕಪ್ಪ ತೆರಳಿದ್ದರು. ಈ ವೇಳೆ ತಂದೆ ಮತ್ತು ಮಗನ ನಡುವೆ ಆಸ್ತಿ ವಿಷಯವಾಗಿ ಜಗಳ ನಡೆದಿದ್ದು, ಸಿಟ್ಟಿನಿಂದ ಮಗ ನಾಗಪ್ಪ ತಂದೆಯ ಮೇಲೆ ಹಲ್ಲೆ ಮಾಡಿದಾಗ ಸ್ಥಳದಲ್ಲಿಯೇ ಯಂಕಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಬಂಧಿಸಲಾಗಿದ್ದು, ಭೀಮರಾಯನಗುಡಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.