×
Ad

ಯಾದಗಿರಿ | ಸೃಜನಶೀಲ ವ್ಯಕ್ತಿ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು : ಹೊನ್ನಪ್ಪ ದೊಡ್ಡಮನಿ

Update: 2025-04-03 18:14 IST

ಸೈದಾಪುರ : ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಿ ಸೃಜನಶೀಲ ವ್ಯಕ್ತಿಗಳನ್ನಾಗಿ ನಿರ್ಮಾಣ ಮಾಡುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಎಂದು ಗ್ರಾಮ ಪಂಚಾಯತ್‌ ಸದಸ್ಯ ಹೊನ್ನಪ್ಪ ದೊಡ್ಡಮನಿ ಅಭಿಪ್ರಾಯಪಟ್ಟರು.

ಸಮೀಪದ ಬಳಿಚಕ್ರ ಗ್ರಾಮದ ಜ್ಞಾನ ದೀಪ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬುಧವಾರ 8ನೇ ತರಗತಿ ಮಕ್ಕಳಿಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಮತ್ತು ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರತಿಯೊಬ್ಬ ವಿದ್ಯಾರ್ಥಿಗಳ ಬಗ್ಗೆ ಪೋಷಕರಿಗಿಂತ ಹೆಚ್ಚು ಶಿಕ್ಷಕರು ತರಗತಿ ಕೋಣೆಯಲ್ಲಿ ಮಕ್ಕಳ ಸಮಗ್ರ ಅಭಿವೃದ್ಧಿಯ ಬಗ್ಗೆ ಕಾಳಜಿ ವಹಿಸುತ್ತಾರೆ. ವಿದ್ಯಾರ್ಥಿಗಳಲ್ಲಿನ ಅಭಿರುಚಿಯನ್ನು ಗುರುತಿಸುವುದು, ಅದಕ್ಕೆ ಬೇಕಾದ ಕಲಿಕೆಯನ್ನು ಕಲಿಸಿಕೊಡುತ್ತಾರೆ. ಮಕ್ಕಳು ಹೆಚ್ಚಿನ ಸಮಯ ಶಿಕ್ಷಕರೊಂದಿಗೆ ಕಳೆಯುವುದರಿಂದ ಶಿಕ್ಷಕರ ಪ್ರಭಾವ ಹೆಚ್ಚಾಗಿರುತ್ತದೆ. ಆದ್ದರಿಂದ ಶಿಕ್ಷಕರು ಉತ್ತಮ ಶಿಕ್ಷಣ ಕಲಿಸಿಕೊಡಬೇಕು ಎಮದು ಶಿಕ್ಷಕರಿಗೆ ಕಿವಿ ಮಾತಿ ಹೇಳಿದರು.

ಸಂಸ್ಥೆಯ ಅಧ್ಯಕ್ಷ ಭೀಮರಾಯ ಕೊಟಗೇರಾ ಮಾತನಾಡಿದರು. ನಂತರ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳಿಂದ ಸಾಂಸ್ಕೃತಿ ಕಾರ್ಯಕ್ರಮಗಳು ನಡೆದವು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕಿ ಅಶ್ವಿನಿ ಬಿ.ಕೊಟಗೇರಾ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಫಾತಿಮಾ ಬಿ., ಸದಸ್ಯರಾದ ಸಲೀಂ, ಮಂಜುನಾಥ, ಚೆನ್ನಪ್ಪ, ತಾಲ್ಲೂಕು ಸಂಚಾಲಕ ಆಂಜನೇಯ, ಅಬ್ದುಲ್ ಮುಲ್ಲಾ, ಉತ್ತಪ್ಪ ಉಪ್ಪಾರ, ಅಂಗನವಾಡಿ ಕಾರ್ಯಕರ್ತೆ ಬನ್ನಮ್ಮ, ಭೀಮಣ್ಣ ಸಂಗವಾರ ಹಾಗೂ ವಿದ್ಯಾರ್ಥಿಗಳು, ಪೋಷಕರು, ಗ್ರಾಮಸ್ಥರು ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News