ಯಾದಗಿರಿ | ಕೆಂಭಾವಿಯಲ್ಲಿ ಟಿಪ್ಪು ಜಯಂತಿ ಆಚರಣೆ
ಕೆಂಭಾವಿ : ಟಿಪ್ಪು ಸುಲ್ತಾನ್ ಜಯಂತಿಯ ಪ್ರಯುಕ್ತ ಕೆಂಭಾವಿಯ ಟಿಪ್ಪು ಸುಲ್ತಾನ್ ವೃತ್ತದಲ್ಲಿ ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪೊಲೀಸಪಾಟೀಲ್ ಹಾಗೂ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ವಾಮನರಾವ್ ದೇಶಪಾಂಡೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಾಮನರಾವ್ ದೇಶಪಾಂಡೆ, “ಟಿಪ್ಪು ಸುಲ್ತಾನ್ ಕರ್ನಾಟಕದ ಇತಿಹಾಸದಲ್ಲಿ ಅಜರಾಮರವಾದ ವ್ಯಕ್ತಿ. ಅವರ ಆಡಳಿತಾವಧಿಯಲ್ಲಿ ಕಲೆ, ಸಾಹಿತ್ಯ, ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ. ವಿಜ್ಞಾನ ಕ್ಷೇತ್ರದಲ್ಲಿಯೂ ಅವರ ಸಾಧನೆ ವಿಶಿಷ್ಟ. ಟಿಪ್ಪು ಕರ್ನಾಟಕದ ಅಖಂಡತೆಗಾಗಿ ಹೋರಾಡಿದ ದೇಶಪ್ರೇಮಿ, ತನ್ನ ಹೆತ್ತ ಮಕ್ಕಳನ್ನೇ ಒತ್ತೆ ಇಟ್ಟ ಮಹಾನ್ ನಾಯಕ ಎಂದರು.
ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದ ಟಿಪ್ಪು, ನಂಜನಗೂಡಿನ ನಂಜುಡೇಶ್ವರ ದೇವರ ಪರಮಭಕ್ತರಾಗಿದ್ದರು. ಅವರ ಶೌರ್ಯ, ಪರಾಕ್ರಮ, ದೇಶಭಕ್ತಿ ಇಂದಿನ ಯುವ ಪೀಳಿಗೆಗೆ ಮಾದರಿ” ಎಂದು ಹೇಳಿದರು.
ಮಾಜಿ ಜಿಪಂ ಅಧ್ಯಕ್ಷ ಸಿದ್ದನಗೌಡ ಪೊಲೀಸಪಾಟೀಲ್, ಸಂಜೀವರಾವ್ ಕುಲಕರ್ಣಿ ಸೇರಿದಂತೆ ಮುಖಂಡರಾದ ಖಾಜಾ ಪಟೇಲ್ ಕಾಚೂರ, ಸಾಹೇಬಲಾಲ್ ಆಂದೇಲಿ, ಶಫೀಕ್ ದಫೇದಾರ್, ಬಂದೇನವಾಜ ನಾಲತವಾಡ, ರಹೆಮಾನ ಪಟೇಲ್, ವಿಲಾಸರಾವ್ ದೇಶಪಾಂಡೆ, ಮಹಿಪಾಲರೆಡ್ಡಿ ಡಿಗ್ಗಾವಿ, ರವಿ ಸೊನ್ನದ, ನಝೀರ್, ಅಕ್ಬರ್ ದಫೇದಾರ್, ಅಯ್ಯುಬ ಸಲಾಂ, ದಸ್ತಗೀರ, ಶಿವಪ್ಪ ಕಂಬಾರ, ನಯುಮ್ ಖಾಜಿ, ಇಸ್ಮಾಯಿಲ್ ಸಾಸನೂರ, ಜಿಲಾನಿ ನಾಶಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.