×
Ad

ಯಾದಗಿರಿ | ಆ.24ರಂದು ಶೋಷಿತ ವರ್ಗಗಳ ಐಕ್ಯತಾ ಸಮಾವೇಶ : ಮಲ್ಲಿಕಾರ್ಜುನ ಪೂಜಾರಿ

Update: 2025-08-16 18:23 IST

ಯಾದಗಿರಿ: ಶೋಷಣೆಗೊಳಗಾದ ದಲಿತ ಮತ್ತು ಶೋಷಿತ ಸಮುದಾಯವನ್ನು ಜಾಗೃತಿ ಮೂಡಿಸುವ ಉದ್ದೇಶದಿಂದ ʼಶೋಷಿತ ವರ್ಗಗಳ ಐಕ್ಯತಾ ಸಮಾವೇಶʼವನ್ನು ಶಹಾಪೂರ ತಾಲ್ಲೂಕಿನ ಆರಬೋಳ ಕಲ್ಯಾಣ ಮಂಟಪದಲ್ಲಿ ಆ.24 ರಂದು ಬೆಳಿಗ್ಗೆ 11.ಗಂಟೆಗೆ ವಾಲ್ಮೀಕಿ ಚೌಕದಿಂದ ಚರಬಸವೇಶ್ವರ ಕಮಾನದವರಿಗೆ ಬೈಕ್ ರ‍್ಯಾಲಿ ಮೂಲಕ ಮೆರವಣಿಗೆ ನಡೆದು 12 ಗಂಟೆಗೆ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಮಲ್ಲಿಕಾರ್ಜುನ ಪೂಜಾರಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಶತ ಶತಮಾನಗಳಿಂದ ದುಡಿಯುವ ನಮ್ಮ ಶೋಷಿತ ಸಮುದಾಯ ರಾಜಕೀಯವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಇನ್ನೂ ದಲಿತ ಸಮಾಜ ಹಿಂದುಳಿದುಕೊಂಡಿವೆ. ಇಂತಹ ಜಾಗೃತಿ ಸಮಾವೇಶವನ್ನು ಹಮ್ಮಿಕೊಂಡು ಬುದ್ಧ, ಬಸವ, ಅಂಬೇಡ್ಕರ್ ಚಿಂತನೆ ಮತ್ತು ತತ್ವ ಸಿದ್ದಾಂತವನ್ನು ತಿಳಿಪಡಿಸುವ ಮೂಲಕ ಡಾ.ಅಂಬೇಡ್ಕರ್ ಆಸೆಯದಂತೆ ಶೋಷಿತ ಸಮುದಾಯ ಆಳುವ ವರ್ಗವಾಗಬೇಕು ಅಂಬೇಡ್ಕರ್ ಅವರ ಕನಸು ನಾವೆಲ್ಲರೂ ಒಗ್ಗೂಡಿ ನನಸು ಮಾಡಬೇಕಾಗಿದೆ ಎಂದು ಹೇಳಿದರು.

ಈ ಸಮಾವೇಶದಲ್ಲಿ ಉರಿಲಿಂಗ ಪೆದ್ದಿ ಮಹಾ ಸಂಸ್ಥಾನಮಠ ಶ್ರೀ ಜ್ಞಾನಪ್ರಕಾಶ ಮಹಾಸ್ವಾಮಿಗಳು ಸಾನಿಧ್ಯ ವಹಿಸುವರು, ಜಿಲ್ಲಾ ಉಸ್ತುವಾರಿ ಶರಣಬಸಪ್ಪಗೌಡ ದರ್ಶನಾಪೂರ ಅವರು ಸಮಾವೇಶವನ್ನು ಉದ್ಘಾಟಿಸುವರು. ಸಮಾಜ ಕಲ್ಯಾಣ ಸಚಿವ ಡಾ. ಹೆಚ್.ಸಿ. ಮಹಾದೇವಪ್ಪ ಅವರು ಸಾಮಾಜಿಕ ಪರಿವರ್ತನಾಕಾರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವರು, ಸಚಿವ ಸತೀಶ್ ಜಾರಕೀಹೋಳಿ ಜ್ಯೋತಿಬೆಳಗಿಸುವರು, ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ. ಸಾಗರ ಅಧ್ಯಕ್ಷತೆ ವಹಿಸುವರು, ಮುಖ್ಯ ಅತಿಥಿಗಳಾಗಿ ರಾಜಾ ವೇಣುಗೊಪಾಲ ನಾಯಕ, ವಿಧಾನ ಪರಿಷತ್ ಸದಸ್ಯೆ ತಿಪ್ಪಣ್ಣಪ್ಪ ಕಮಕನೂರ ಭಾಗವಹಿಸುವವರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮರೆಪ್ಪ ಚಟ್ಟೇರಕರ್, ಸುಭಾಸ್ ತಳವಾರ, ರಾಮಣ್ಣ ಸಾದ್ಯಾಪುರ ಭೀಮಾರಯ ಹೊಸಮನಿ ಶಿವುಕುಮಾರ ತಳವಾರ ಶ್ರೀಶೈಲ ಹೊಸಮನಿ, ಮಲ್ಲಿಕಾರ್ಜುನ ಪೂಜಾರಿ, ಭೀಮರಾಯ ತಳವಾರ,, ಶಿವುಪುತ್ರ ಜವಳಿ, ಶರಣು ಎಸ್ ನಾಟೇಕಾರ್, ಹೊನಪ್ಪ ಗಂಗನಾಳ, ಸುರೇಶ್ ಬೊಮ್ಮನ್ ಗೋಪಾಲ ತೆಳಗೇರಿ, ಸೈದಪ್ಪ ಕೂಯಿಲೂರ್, ಚಂದಪ್ಪ ಮುನಿಯಪ್ಪನೋರ, ಮರೆಪ್ಪ ಕ್ರಾಂತಿ, ಶರಣಪ್ಪ ಬೂತಾಳಿ, ಡಾ‌ ಗಾಳೆಪ್ಪ ಪೂಜಾರಿ, ಬಾಲರಾಜ್ ಖಾನಾಪೂರ, ಸೇರಿದಂತೆ ಅನೇಕರು ಇದ್ದರು.

ದಲಿತರ "ಧೃವತಾರೆ" ಎಂದು ಹೆಸರು ಪಡೆದ ಡಾ.ಡಿ.ಜಿ.ಸಾಗರ ಅವರನ್ನು ಹಾಗೂ ಸಮ ಸಮಾಜದ ಚಿಂತಕರು, ಅಪ್ಪಟ ಬುದ್ಧ, ಬಸವ, ಅಂಬೇಡ್ಕರ್ ರವರ ಅನುಯಾಯಿ ಮತ್ತು ಸರಕಾರಿ ಶಿಕ್ಷಕ ವೃತ್ತಿಯಿಂದ ಸೇವಾ ವಯೋನಿವೃತ್ತಿ ಹೊಂದಿದ ಶ್ರೀಶೈಲ ಹೊಸ್ಮನಿ ಅವರನ್ನು ಈ ಸಮಾವೇಶದಲ್ಲಿ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News