×
Ad

ಯಾದಗಿರಿ: ಹೊಸ್ಕೆರ ಗ್ರಾಮಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಎಸ್ ಎಫ್ ಐ ಪ್ರತಿಭಟನೆ

Update: 2025-06-24 14:30 IST

ಯಾದಗಿರಿ: ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಯಾದಗಿರಿ ಜಿಲ್ಲಾ ಸಂಘಟನೆ ಸಮಿತಿ ನೇತೃತ್ವದಲ್ಲಿ ಸೋಮವಾರ ಹೊಸಕೇರಿ ಗ್ರಾಮದ ವಿದ್ಯಾರ್ಥಿಗಳು ಗ್ರಾಮದಲ್ಲಿ ಬಸ್ ತಡೆದು ಪ್ರತಿಭಟನೆ ನಡೆಸಲು ಮುಂದಾದ ಸಂದರ್ಭದಲ್ಲಿ ಶಾಹಪುರ್ ಡಿಪೋದಿಂದ ಒಂದು ಹೊಸ ಬಸ್ ಬಂದು ವಿದ್ಯಾರ್ಥಿಗಳನ್ನು ಶಹಾಪುರಕ್ಕೆ ಕರೆದೊಯ್ಯಲಾಯಿತು. ತದನಂತರ ವಿದ್ಯಾರ್ಥಿಗಳು ಶಹಾಪುರ ಡಿಪೋ ಮ್ಯಾನೇಜರ್ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದರು.

ಭಾರತ ವಿದ್ಯಾರ್ಥಿ ಫೆಡರೇಶನ್ ಎಸ್ ಎಫ್ ಐ ಶಹಾಪುರ ತಾಲ್ಲೂಕು ಸಮಿತಿ ವತಿಯಿಂದ ಡಿಪೋ ಮ್ಯಾನೇಜರ್ ಅವರಿಗೆ ಜೂನ್ 19 2025 ರಂದು ಬಸ್ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದರೂ, ಅಧಿಕಾರಿಗಳು ನಿರ್ಲಕ್ಷ್ಯ ತೋರಿ,‌ ಬೇಡಿಕೆ ಈಡೇರಿಸಿಲ್ಲವೆಂದು ಪ್ರತಿಭಟನಾಕಾರರು ಆರೋಪಿಸಿದರು.

ಪ್ರತಿಭಟನೆ ಉದ್ದೇಶಿಸಿ ಎಸ್ಎಫ್ಐ ಜಿಲ್ಲಾ ಸಂಚಾಲಕರು ಇಮಾಮಸಾಬ್ ನದಾಫ್ ಮಾತನಾಡಿ, "ನೂರಾರು ವಿದ್ಯಾರ್ಥಿಗಳು ನಗರ ಪ್ರದೇಶಕ್ಕೆ ಶಿಕ್ಷಣಕ್ಕಾಗಿ ಬರುತ್ತಾರೆ. ಆದರೆ ಅವರಿಗೆ ಸಮರ್ಪಕ ಬಸ್ ವ್ಯವಸ್ಥೆಯಿಲ್ಲದೇ ದಿನನಿತ್ಯ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೇ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ತಡವಾಗಿ ಹೋಗುವುದ್ದರಿಂದ ಹಾಜರಾತಿ ಕೊರತೆಯಿಂದ ಶಿಕ್ಷಣ ಕುಂಠಿತವಾಗಿದೆ. ಎಷ್ಟೋ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸವನ್ನೇ ಮಟುಕುಗೊಳ್ಳಿಸಿದ್ದಾರೆ. ಹಾಗಾಗಿ ನಮ್ಮ ಹೊಸ್ಕೆರ ಗ್ರಾಮಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸಿಕೊಂಡಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಂಚಾಲಕರು ಇಮಾಮಸಾಬ್ ನದಾಫ್, ಕರ್ನಾಟಕ ಪ್ರಾಂತ ರೈತ ಸಂಘ ತಾಲೂಕು ಕಾರ್ಯದರ್ಶಿ ಭೀಮರಾಯ ಪೂಜಾರಿ ಗ್ರಾಮ ಘಟಕದ ಅಧ್ಯಕ್ಷ ಶರಣುಗೌಡ, ಕಾರ್ಯದರ್ಶಿ ಗೀತಾ ಮತ್ತು ಪದಾಧಿಕಾರಿಗಲಾದ ಗಂಗಾ, ಬಸವರಾಜ್, ವಿದ್ಯಾಶ್ರೀ ಮತ್ತು ಅನೇಕ ವಿದ್ಯಾರ್ಥಿಗಳು ಇನ್ನಿತರರು‌ ಇದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News