×
Ad

ಯಾದಗಿರಿ | ಗುರುಬಸಪ್ಪ ಹಳಕಟ್ಟಿ ಅವರು ವಚನ ಸಂಗ್ರಹಕ್ಕಾಗಿ ಬದುಕು ಮೀಸಲಿಟ್ಟ ಧಿಮಂತ ವ್ಯಕ್ತಿ : ಸಿ.ಎಮ್.ಪಟ್ಟೇದಾರ್

Update: 2025-07-02 19:04 IST

ಯಾದಗಿರಿ: ವಚನ ಪಿತಾಮಹ ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಅವರು ವಚನ ಸಂಗ್ರಹಕ್ಕಾಗಿ ಬದುಕು ಮೀಸಲಿಟ್ಟ ಧಿಮಂತ ಎಂದು ಹಿರಿಯ ಸಾಹಿತಿ ಸಿ.ಎಮ್. ಪಟ್ಟೇದಾರ್ ಹೇಳಿದರು.

ನಗರದ ಲಿಂಗೇರಿ ಕೋನಪ್ಪ ಕಾಲೇಜ್ ನಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಫ.ಗು.ಹಳಕಟ್ಟಿ ಜಯಂತ್ಯೋತ್ಸವ ಸಮಿತಿ ಇವುಗಳ ಸಂಯುಕ್ತಾಶ್ರಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಡಾ.ಫ.ಗು.ಹಳಕಟ್ಟಿ ಜಯಂತ್ಯೋತ್ಸವ ಅಂಗವಾಗಿ ಅವರ ಭಾವ ಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಫ.ಗು.ಹಳಕಟ್ಟಿ ಅವರು ತಮ್ಮ ಸರ್ವಸ್ವವನ್ನೂ ವಚನ ಸಾಹಿತ್ಯ ಸಂಶೋಧನೆ, ಶೈಕ್ಷಣಿಕ, ಸಹಕಾರ ಮತ್ತು ಕೃಷಿ ಇತರೇ ಕ್ಷೇತ್ರಗಳ ಏಳಿಗೆಗಾಗಿ ಧಾರೆ ಎರೆದ ಮಹಾದಾನಿಗಳಾಗಿದ್ದಾರೆಂದರು.

ಮುದ್ನಾಳ ಸರ್ಕಾರಿ ಪ್ರೌಢ ಶಾಲೆ ಮುಖ್ಯ ಗುರುಗಳಾದ ಶ್ರೀನಿವಾಸ್ ಕರ್ಲಿ ಮಾತನಾಡಿ, ವಚನ ಸಾಹಿತ್ಯದ ಜೀವಂತಿಕೆಗೆ ಹಳಕಟ್ಟಿಯವರ ಕೊಡುಗೆ ಅಪಾರವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಅಯ್ಯಣ್ಣ ಹುಂಡೇಕಾರ್, ಲಿಂಗೇರಿ ಕೌನಪ್ಪ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಗುರಪ್ಪ ವಿಶ್ವಕರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಉತ್ತರಾದೇವಿ ಮಠಪತಿ ಸೇರಿದಂತೆ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News