ಯಾದಗಿರಿ | ರೈತರ ಮೇಲೆ ಹಲ್ಲೆ ನಡೆಸಿದವರ ಬಂಧನಕ್ಕೆ ಒತ್ತಾಯಿಸಿ ಮನವಿ
ಸುರಪುರ: ನಗರದ ಕುಂಬಾರಪೇಟ ವೃತ್ತದ ಬಳಿಯ ಕವಡಿಮಟ್ಟಿ ರಸ್ತೆಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನಗರದ ಪೊಲೀಸ್ ಠಾಣೆ ಮುಂದೆ ಜಯ ಕರ್ನಾಟಕ ರಕ್ಷಣಾ ಸೇನೆ ವೃತ್ತದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಸಾಂಕೇತಿಕ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅನೇಕ ಮುಖಂಡರು, ಮಂಗಳವಾರ ಬೆಳಗಿನ ಜಾವ ಕೊಡೇಕಲ್ ಗ್ರಾಮಕ್ಕೆ ಎತ್ತುಗಳ ಖರಿದಿಗೆಂದು ಹೊರಟಿದ್ದ ಹಸನಾಪುರದ ರೈತ ನಿಂಗಪ್ಪ ನಂಬಾ ಸೇರಿದಂತೆ ಇತರರು ಬುಲೆರೋ ಪಿಕಪ್ ವಾಹನ ತೆಗೆದುಕೊಂಡು ಹೊರಟಿದ್ದಾಗ, ಕವಡಿಮಟ್ಟಿ ಹೋಗುವ ರಸ್ತೆಯಲ್ಲಿ ಯಾರೋ ಅಪರಿಚಿತರಿಬ್ಬರು ಬೈಕ್ ಮೇಲೆ ಬಂದು ವಾಹನಕ್ಕೆ ಬೈಕ್ ಅಡ್ಡಗಟ್ಟಿ ವಿನಾಕಾರಣ ರೈತರ ಮೇಲೆ ಹಲ್ಲೆ ನಡೆಸಿದ್ದಾರೆ. ರೈತರನ್ನು ದರೋಡೆ ಮಾಡಲೆಂದು ಈ ರೀತಿ ಮಾಡಿದ್ದಾರೆ. ಕೂಡಲೇ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಎಲ್ಲ ಸಂಘಟನೆಗಳು ಸೇರಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.
ನಂತರ ಡಿವೈಎಸ್ಪಿಗೆ ಬರೆದ ಮನವಿ ಪಿಎಸ್‌ಐಗಳಾ ಸಿದ್ದಣ್ಣ ಯಡ್ರಾಮಿ ಹಾಗೂ ಶರಣಪ್ಪ ಹವಲ್ದಾರ್ ಮೂಲಕ ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಅಧ್ಯಕ್ಷ ಮಲ್ಲಪ್ಪ ನಾಯಕ ಕಬಾಡಗೇರ, ಕಾರ್ಯಾಧ್ಯಕ್ಷ ಶಿವರಾಜ ವಗ್ಗಾರ್, ಕೃಷ್ಣಾ ಹಾವಿನ್, ಹಣಮಂತ ಭಂಡಾರಿ, ರಂಗಪ್ಪ ನಾಯಕ, ಸಂತೋಷ ನಾಯಕ,ಹಣಮಂತ ಶುಕ್ಲಾ,ನಾಗಲಿಂಗ ಕರೆಗಾರ,ಸಾಯಬಣ್ಣ ಯಾದವ್, ಚಂದ್ರು ಎಲಿಗಾರ, ರಮೇಶ ನಂಬಾ, ಶಿವಕುಮಾರ ಗಾಜಲದಿನ್ನಿ, ವಿರೇಶ ರತ್ತಾಳ, ಸಿದ್ದು ತುಮಕೂರ, ಪ್ರವೀಣ ವಿಭೂತೆ,ಮಂಜು ಪಾಟೀಲ್,ಶಿವು ಮುಡ್ಡಾ,ನಾಗಲಿಂಗ ಕರೆಗಾರ, ಸಿದ್ದು ಮಡಿವಾಳ, ಸಂತೋಷ ನಾಯಕ ಸತ್ಯಂಪೇಟೆ, ನಾಗರಾಜ ನಂಬಾ, ದೇವು ಪವಾರ್, ನಿಂಗಪ್ಪ ಸಿದ್ದಾಪುರ ಸೇರಿದಂತೆ ಅನೇಕರು ಭಾಗವಹಿಸಿದ್ದರು.