×
Ad

ಯಾದಗಿರಿ | ಅಪರಿಚಿತ ಗಂಡು ಮಗುವಿನ ವಾರಸುದಾರರ ಪತ್ತೆಗೆ ಮನವಿ

Update: 2025-06-24 17:31 IST

ಸಾಂದರ್ಭಿಕ ಚಿತ್ರ

ಯಾದಗಿರಿ : ಜೂ.21 ರಂದು ರಾಯಚೂರು ರೈಲ್ವೇ ನಿಲ್ದಾಣದ ವೇದಿಕೆ ನಂ.1ರ ಕೃಷ್ಣಾ ಎಂಡ್ ಕಡೆಗೆ ಕಂಪೌಂಟ್ ಪಕ್ಕದಲ್ಲಿ 3 ತಿಂಗಳ ಗಂಡು ಮಗುವಿನ ಮೃತ ದೇಹ ದೊರೆತಿದ್ದು, ಈ ಕುರಿತು ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಬಿ.ಎನ್.ಎಸ್.ಎಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ರಾಯಚೂರು ರೈಲ್ವೆ ಆರಕ್ಷಕ ಉಪ ನಿರೀಕ್ಷಕರು ಅವರು ತಿಳಿಸಿದ್ದಾರೆ.

ಅಪರಿಚಿತ ಮಗುವಿನ ಮೃತದೇಹವನ್ನು ಯಾರೊ ದುಷ್ಕರ್ಮಿಗಳು ಒಂದು ಕಪ್ಪು ಬಣ್ಣದ ಬ್ಯಾಗ್‌ನಲ್ಲಿ ಬಿಸಾಕಿ ಹೋಗಿದ್ದು, ಮೃತದೇಹ ದೋರೆತ ಘಟನಾ ಸ್ಥಳಗಳಲ್ಲಿ ಮೃತನ ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ. ಈ ಮೃತ ಮಗುವಿನ ವಾರುಸುದಾರರ ಪತ್ತೆ ಹಾಗೂ ಪಿ.ಎಂ.ಇ. ಸಲುವಾಗಿ ಮೃತದೇಹಗಳನ್ನು ಸರಕಾರಿ ರಿಮ್ಸ್ ಆಸ್ಪತ್ರೆಯ ಶೀತಲ ಶವಗಾರದಲ್ಲಿಟ್ಟಿರುತ್ತದೆ.

ಮಗು ಸುಮಾರು 3 ತಿಂಗಳಿದಾಗಿದ್ದು, ಎತ್ತರ ಸುಮಾರು 18 ಇಂಚು, ಸಾದಾ ಕಪ್ಪು ಮೈ ಬಣ್ಣ, ತಲೆಯಲ್ಲಿ 1 ಇಂಚು ಕಪ್ಪು ಕೂದಲು, ಮಂಡ ಮೂಗು, ಕಣ್ಣುಗಳು ಮುಚ್ಚಿರುತ್ತವೆ. ಒಂದು ನೀಲಿ ಬಣ್ಣದ ರೆಡಿಮೇಡ್ ಬನಿಯಾನ್ ಇರುತ್ತದೆ. ಈ ಮೃತ ಅಪರಿಚಿತ ಗಂಡ ಮಗು ವಾರಸುದಾರರ ಪತ್ತೆ ಕುರಿತು ಸಾರ್ವಜನಿಕರಲ್ಲಿ, ಸಮೂಹ ಮಾದ್ಯಮಗಳಲ್ಲಿ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕೋರಿದ್ದು, ಮೃತ ಮಗುವಿನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತ ಮಗುವಿನ ಹೋಲಿಕೆಯ ಮಗು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂ.ನಂ.08532 231716, ಮೊ.ನಂ.9480802111 ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ.08022871291ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News