×
Ad

ಯಾದಗಿರಿ | ಮೃತ ವ್ಯಕ್ತಿಯ ವಾರಸುದಾರರ ಪತ್ತೆಗೆ ಮನವಿ

Update: 2025-06-24 17:41 IST

ಸಾಂದರ್ಭಿಕ ಚಿತ್ರ

ಯಾದಗಿರಿ: ಜೂ.15 ರಂದು ರಾಯಚೂರು ರೈಲ್ವೆ ನಿಲ್ದಾಣದ ವೇದಿಕೆ ನಂಬರ್ 1ರ ಬಳಿ ದಾದರ್ ಕೆಳಗಡೆ ಅಪರಿಚಿತ ವ್ಯಕ್ತಿಯೊರ್ವರ ಮೃತದೇಹ ಕಂಡುಬಂದಿದ್ದು, ಈ ಕುರಿತು ರಾಯಚೂರು ರೈಲ್ವೇ ಪೊಲೀಸ್ ಠಾಣೆಯಲ್ಲಿ ಯು.ಡಿ.ಆರ್ ಬಿ.ಎನ್.ಎಸ್.ಎಸ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿದಿದೆ ಎಂದು ರಾಯಚೂರು ರೈಲ್ವೆ ಆರಕ್ಷಕ ಉಪ ನಿರೀಕ್ಷಕರು ಅವರು ತಿಳಿಸಿದ್ದಾರೆ.

ಮೃತದೇಹ ದೋರೆತ ಘಟನಾ ಸ್ಥಳಗಳಲ್ಲಿ ಮೃತನ ವಾರಸುದಾರರು ಯಾರು ಪತ್ತೆಯಾಗಿರುವುದಿಲ್ಲ, ಈ ಮೃತನ ವಾರಸುದಾರರ ಪತ್ತೆ ಹಾಗೂ ಪಿ.ಎಂ.ಇ ಸಲುವಾಗಿ ಮೃತದೇಹಗಳನ್ನು ಸರಕಾರಿ ರಿಮ್ಸ್ ಆಸ್ಪತ್ರೆಯ ಶೀತಲ ಶವಗಾರದಲ್ಲಿಟ್ಟಿರುತ್ತದೆ.

ಮೃತನ ಚಹರೆ ಪಟ್ಟಿಯ ವಿವರ: ಅಪರಿಚಿತ ಪುರಷ ಸುಮಾರು 40 ರಿಂದ 50 ವರ್ಷ, ಎತ್ತರ ಸುಮಾರು 5 ಫೀಟ್ 2 ಇಂಚು ಉದ್ದವಾದ ಮುಖ, ಸಾದಾ ಕಪ್ಪು ಮೈ ಬಣ್ಣ, ಬಡಕಲು ಮೈಕಟ್ಟು ತಲೆಯಲ್ಲಿ 8 ಇಂಚು ಕಪ್ಪು ಬಿಳಿ ಕೂದಲು, 2 ಇಂಚು ಗಡ್ಡ, 1 ಇಂಚು ಮೀಸೆ ಉದ್ದವಾದ ಮೂಗು ಇರುತ್ತದೆ.

ಈ ಮೃತ ಅಪರಿಚಿತ ವ್ಯಕ್ತಿಯ ವಾರಸುದಾರರ ಪತ್ತೆಯ ಕುರಿತು ಸಾರ್ವಜನಿಕರಲ್ಲಿ ಸಮೂಹ ಮಾಧ್ಯಮಗಳಲ್ಲಿ, ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೆ ಕೋರಿದ್ದು, ಮೃತನ ವಾರಸುದಾರರು ಪತ್ತೆಯಾದಲ್ಲಿ ಅಥವಾ ಈ ಮೃತನ ಹೋಲಿಕೆಯ ಗಂಡಸು ಕಾಣೆಯಾದ ಪ್ರಕರಣ ದಾಖಲಾಗಿದ್ದಲ್ಲಿ ರಾಯಚೂರು ರೈಲ್ವೇ ಪೊಲೀಸ್ ಠಾಣೆಯ ದೂ.ನಂ.08532, 231716 ಅಥವಾ ಮೊ.ನಂ.9480802111, ರೈಲ್ವೇ ಪೊಲೀಸ್ ಕಂಟ್ರೋಲ್ ರೂ.ಸಂ.080 22871291ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News