ಯಾದಗಿರಿ | ಭೀಮವಾದ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳ ನೇಮಕ
ಸುರಪುರ: ಭೀಮವಾದ ದಲಿತ ಸಂಘರ್ಷ ಸಮಿತಿ ಇಂದು ರಾಜ್ಯಾದ್ಯಂತ ಶಾಖೆಗಳನ್ನು ಹೊಂದಿ ರಾಜ್ಯದಲ್ಲಿನ ದೀನ ದಲಿತ ಶೋಷಿತರಿಗಾಗಿ ಹೋರಾಟ ಮಾಡಿ ನಮ್ಮ ಸಂಘಟನೆ ಮೂಲಕ ಸರ್ವರಿಗೂ ನ್ಯಾಯ ಕೊಡಿಸೋಣ ಎಂದು ಜಿಲ್ಲಾ ಸಂಚಾಲಕ ಶಿವಶಂಕ ಹೆಚ್.ಹೊಸಮನಿ ತಿಳಿಸಿದರು.
ನಗರದ ಟೈಲರ್ ಮಂಜಿಲ್ ಪ್ರವಾಸಿ ಮಂದಿರದಲ್ಲಿ ನಡೆದ ತಾಲೂಕು ಘಟಕದ ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದು ತಾವೆಲ್ಲರೂ ಭೀಮವಾದ ದಲಿತ ಸಂಘರ್ಷ ಸಮಿತಿ ಸೇರುವ ಮೂಲಕ ತಾಲೂಕಿನಲ್ಲಿ ಸಂಘಟನೆ ಬೆಳೆಸಲು ಕೈಜೋಡಿಸಿರುವ ಎಲ್ಲರಿಗೂ ಭೀಮ ವಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಘಟಕದ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಲಾಯಿತು. ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಸಿದ್ದಾರ್ಥ ಸಿಂಘೆ, ರಾಜ್ಯ ಸಂಘಟನಾ ಸಂಚಾಲಕರಾದ ಸಂಜೀವ ಕಾಂಬಳೆ, ಡಾ.ಈರಣ್ಣ ಕಸನ್ ನೇತೃತ್ವವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮೂರ್ತಿ ಬೊಮ್ಮನಹಳ್ಳಿ, ಮಲ್ಲಪ್ಪ ಲಂಡನಕರ್ ತಡಿಬಿಡಿ, ಪರಶುರಾಮ ಹೈಯ್ಯಾಳಕರ್, ಸಿದ್ದರಾಮ ನಾಯ್ಕಲ್, ಮಲ್ಲಿಕಾರ್ಜುನ ತಳವಾರಗೇರ, ಹಣಮಂತ್ರಾಯ ಬಿಜಾಸಪುರ, ಹಣಮಂತ ತೇಲ್ಕರ್, ಪರಶುರಾಮ ಮದರಕಲ್, ರಾಜು ಕುದರಿ, ಎಂ.ಡಿ.ಸೈಯ್ಯದ್ ಖುರೇಶಿ ಸಭೆಯಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ವೆಂಕಟೇಶ ಕಟ್ಟಿಮನಿ ಮತ್ತು ಮಲ್ಲಿಕಾರ್ಜುನ ಬಡಿಗೇರ ಇವರನ್ನು ಜಿಲ್ಲಾ ಸಂಘಟನಾ ಸಂಚಾಲಕರನ್ನಾಗಿ, ಪರುಷೋತ್ತಮ ಬಬಲಾದಿಯನ್ನು ಶಹಾಪುರ ತಾ.ಸಂ.ಸಂಚಾಲಕರನ್ನಾಗಿ ನೇಮಕಗೊಳಿಸಲಾಯಿತು.
ತಾಲೂಕ ಘಟಕ ಪದಾಧಿಕಾರಿಗಳು: ಮಲ್ಲಿ ಕಟ್ಟಿಮನಿ ಮುಷ್ಠಳ್ಳಿ (ಸಂಚಾಲಕ), ಬಸವರಾಜ ಬಡಿಗೇರ, ಮಲ್ಲಪ್ಪ ಬಿ.ದೊಡ್ಡಮನಿ, ಡಾ.ಶರಣಪ್ಪ ದೊಡ್ಡಮನಿ, ಮೌಲಾಲ್ ಯಡಹಳ್ಳಿ, ರಘುನಂದ ತೇಲ್ಕರ್ (ಸಂಘಟನಾ ಸಂಚಾಲಕರು), ಚಂದ್ರು ಚಟ್ನಳ್ಳಿ (ಖಜಾಂಚಿ).
ಕೆಂಭಾವಿ ಹೋಬಳಿ ಘಟಕ: ಭೀಮರಾಯ ಮಾಲಗತ್ತಿ (ಸಂಚಾಲಕ), ಸಿದ್ದು ಬೊಮ್ಮನಹಳ್ಳಿ, ಜಗದೀಶ ಬಡಿಗೇರ (ಸಂಘಟನಾ ಸಂಚಾಲಕರು), ದೇವರಾಜ ಖಜಾಂಚಿ.
ಸುರಪುರ ನಗರ ಘಟಕ: ಬೀಲಾಲ್ ಸುರಪುರ (ಸಂಚಾಲಕ), ಖಾಲೀದ್ ಸುರಪುರ, ಪಾರೂಕ್, ರಹೀಮದ್ ಸುರಪುರ, ಮಹಿಬೂಬ ಸುರಪುರ (ಸಂಘಟನಾ ಸಂಚಾಲಕರು) ಹಾಗೂ ಸೈಯದ್ ಅಲಿ ಸುರಪುರ (ಖಜಾಂಚಿ) ಯನ್ನಾಗಿ ನೇಮಕಗೊಳಿಸಲಾಯಿತು