×
Ad

ಯಾದಗಿರಿ | ಕಾಂಗ್ರೆಸ್ ಸರ್ಕಾರದ ವೈಫಲ್ಯ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆ

Update: 2025-06-16 19:59 IST

ಯಾದಗಿರಿ: ನಗರದ ಸುಭಾಷ್ ವೃತ್ತದಲ್ಲಿ ಯಾದಗಿರಿ ವಿಧಾನಸಭೆ ಕ್ಷೇತ್ರದ ಬಿಜೆಪಿ ಗ್ರಾಮೀಣ ಮಂಡಲ ಮತ್ತು ನಗರ ಮಂಡಲ ಸಯೋಗದೊಂದಿಗೆ ಇತ್ತೀಚೆಗೆ ಬೆಂಗಳೂರು ನಗರದ ಚಿನ್ನಸ್ವಾಮಿ ಕ್ರೀಡಾಂಗಣದ ಹತ್ತಿರ ಆರ್‌ಸಿಬಿ ವಿಜಯೋತ್ಸವದಲ್ಲಿ 11 ಜನ ಅಮಾಯಕರು ಸಾವಿಗೀಡಾದ ಹಿನ್ನೆಲೆಯಲ್ಲಿ ಸರ್ಕಾರದ ವೈಫಲ್ಯವನ್ನು ಖಂಡಿಸಿ ಪ್ರತಿಭಟನೆ ಮಾಡಲಾಯಿತು.

ಜಿಲ್ಲಾಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ರಾಜ್ಯದ ಜನತೆಗೆ ಒಳ್ಳೆಯ ಆಡಳಿತ ಕೊಡುವ ಬದಲು ಒಂದಿಲ್ಲದ ಒಂದು ಅವಾಂತರಗಳನ್ನು ಮಾಡುತ್ತಾ ಹಾಗೂ ಭ್ರಷ್ಟಾಚಾರದಿಂದ ದಿನಾ ಲೂಟಿ ಮಾಡುತ್ತ ರಾಜ್ಯದ ಕೊಳ್ಳೆ ಹೊಡೆಯುವ ಸರ್ಕಾರವಾಗಿದೆ. ಒಂದು ಸಣ್ಣ ಕಾರ್ಯಕ್ರಮ ಮಾಡಲು ಆಗದೆ 11 ಜನರ ಬಲಿ ತೆಗೆದುಕೊಂಡು ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದರು.

ಹಿರಿಯ ಮುಖಂಡ ರಾಚಣ್ಣಗೌಡ ಮುದ್ನಾಳ, ಯುವ ಮುಖಂಡ ಮಹೇಶರಡ್ಡಿ ಮುದ್ನಾಳ, ನಾಗರತ್ನ ಕುಪ್ಪಿ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸಿದ್ದಣ್ಣಗೌಡ ಕಾಡಂನೊರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರುಶುರಾಮ ಕುರಕುಂದಿ, ಜಿಲ್ಲಾ ವಕ್ತಾರ ಹಣಮಂತ ಇಟಗಿ,ಜಿಲ್ಲಾ ಉಪಾಧ್ಯಕ್ಷ ಬಸವರಾಜ ಸೋನ್ನದ ಮತ್ತು ಮಾರುತಿ ಕಲಾಲ್, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶ್ರೀಧರ ಆರ್ ಸಾಹುಕಾರ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಸುನಿತಾ ಚೌವ್ಹಾಣ್, ನಗರಸಭೆ ಉಪಾಧ್ಯಕ್ಷೆ ರುಕೀಯ ಬೇಗಂ, ಯುಡ ಮಾಜಿ ಅಧ್ಯಕ್ಷ ಬಸವರಾಜ ಚಂಡ್ರಕಿ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ ಪಾಟೀಲ್, ಮಾಜಿ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ವೆಂಕಟರೆಡ್ಡಿ ಅಬ್ಬೆತುಮಕೂರು, ನಗರಸಭೆ ಸದಸ್ಯ ಸ್ವಾಮಿದೇವ ದಾಸನಕೆರಿ ಮತ್ತು ವಿಜಯಲಕ್ಷ್ಮಿ ನಾಯಕ, ಮಶೇಪ್ಪ ನಾಯಕ,ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ್ ಕಾಡಂನೊರ,ನಗರ ಮಂಡಲ ಅಧ್ಯಕ್ಷ ಲಿಂಗಪ್ಪ ಹತ್ತಿಮನಿ,ಶರಣುಗೌಡ ಐಕುರ,ಮೋನೇಶ ಬೆಳಿಗೇರಿ,ಶಾಂತುಗೌಡ ಪಗಲಪುರ,ಚಂದ್ರಕಾಂತ್ ಕಿಲನಕೇರ, ಚಂದ್ರಕಾಂತ ಮಡ್ಡಿ,ಯಂಕಪ್ಪ ನಾಯಕ, ಜಿಲ್ಲಾ ಕಾರ್ಯದರ್ಶಿ ಚೆನ್ನವೀರಯ್ಯ ಹಿರೇಮಠ, ಸುರೇಶ ರಾಥೋಡ್,ಶಕುಂತಲಾ ಜಿ, ಸ್ನೇಹ ರಸಳಕರ್, ರಾಜಶೇಖರಯ್ಯ ಮುಷ್ಠುರ, ರಾಜು ಉಪ್ಪಿನ್,ಮಲ್ಲಣಗೌಡ ವಡಿಗೇರ, ರಾಜು ಸಾವು, ಲಕ್ಷ್ಮಿಪುತ್ರ ಮಾಲಿಪಾಟೀಲ, ವೆಂಕಟರೆಡ್ಡಿ ಅಣಿಬಿ ಹೆಡಗಿಮದ್ರಾ, ಸೋಮನಗೌಡ ಬಿರಾದರ್, ಗೋವಿಂದಪ್ಪ ಕೊಂಚಟ್ಟಿ,ದೇವಿಂದ್ರಪ್ಪ ಯರಗೋಳ,ರಾಮು ರಾಠೋಡ, ರವಿ ಮುದ್ನಾಳ,ಮಲ್ಲು ಕೊಲಿವಾಡ, ಮಂಜುನಾಥ ಗುತ್ತೆದಾರ, ಚಂದ್ರಶೇಖರ ಕಡೆಸೂರ, ಶ್ರೀಕಾಂತ್ ಸುಂಗಲಕರ್ ಸೇರಿದಂತೆ ನಗರ ಮಂಡಲ ಮತ್ತು ಗ್ರಾಮೀಣ ಮಂಡಲ ಪದಾಧಿಕಾರಿಗಳು ಮತ್ತು ಅನೇಕ ಕಾರ್ಯಕರ್ತರು ಭಾಗಿಯಾಗಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News