ಯಾದಗಿರಿ | ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಕಚೇರಿಯ ಕೇಸ್ ವರ್ಕರ್
Update: 2025-07-18 20:52 IST
ಪ್ರವೀಣಕುಮಾರ
ಯಾದಗಿರಿ: ಇಲ್ಲಿನ ತಹಶೀಲ್ದಾರ್ ಕಚೇರಿಯ ಕೇಸ್ ವರ್ಕರ್ ಒಬ್ಬರು ತಹಶೀಲ್ದಾರ್ ಕಚೇರಿಯಲ್ಲಿ 50 ಸಾವಿರ ರೂ. ಲಂಚದ ಹಣ ಪಡೆಯುತ್ತಿದ್ದಾಗಲೇ ಶುಕ್ರವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಆರೋಪಿಯನ್ನು ವಡಗೇರಾ ತಹಶೀಲ್ದಾರ ಕಚೇರಿಯ ಕೇಸ್ ವರ್ಕರ್ ಪ್ರವೀಣಕುಮಾರ ಎಂದು ಗುರುತಿಸಲಾಗಿದೆ.
ವಡಗೇರಾ ತಹಶೀಲ್ದಾರ್ ಭೂ ವ್ಯಾಜ್ಯದಲ್ಲಿ ಬಾಕಿಯಿದ್ದ ವಿವಾದ ಪ್ರಕರಣವನ್ನು ವಿಲೇವಾರಿ ಮಾಡಿಕೊಡಲು ಲಂಚದ ಬೇಡಿಕೆ ಇಟ್ಟು ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ವಡಗೇರಾದ ಮುಹಮ್ಮದ್ ಸಲಿಂ ಮುಲ್ಲಾ ಎಂಬುವವರು ನೀಡಿದ ದೂರಿನ ಮೇಲೆ ಈ ದಾಳಿ ನಡೆದಿದ್ದು, ಲೊಕಾಯುಕ್ತ ಎಸ್ ಪಿ ಉಮೇಶ ಮಾರ್ಗದರ್ಶನದಲ್ಲಿ ಡಿವೈಎಸ್ ಪಿ ಜೆ.ಎಚ್ ಇನಾಂದಾರ್, ಪಿಐ ಸಿದ್ದರಾಯ ಬಳೂರ್ಗಿ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.