×
Ad

ಯಾದಗಿರಿ | ಮೃತರ ಸಾವಿಗೆ ಕಲುಷಿತ ನೀರು ಕಾರಣವಲ್ಲ: ಜಿ.ಪಂ ಸಿಇಓರಿಂದ ಸ್ಪಷ್ಟನೆ

Update: 2025-07-09 22:46 IST

ಯಾದಗಿರಿ: ಮೃತರ ಸಾವಿಗೆ ಕಲುಷಿತ ನೀರು ಕಾರಣ ಅಲ್ಲ ಎಂಬುವುದು ಆರೋಗ್ಯ ಇಲಾಖೆಯ ವರದಿಯಿಂದ ತಿಳಿದುಬಂದಿದೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

ಜಿಲ್ಲೆಯ ಸುರಪುರ ತಾಲ್ಲೂಕಿನ ಮಾಲಗತ್ತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ತಿಪ್ಪನಟಗಿ ಗ್ರಾಮದಲ್ಲಿ ಕಲುಷಿತ ಕುಡಿಯುವ ನೀರಿನ ಸೇವನೆಯಿಂದ 3 ಜನ ಮೃತಪಟ್ಟಿರುವುದಾಗಿ ವಿವಿಧ ದಿನ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿದ್ದು, ಸದರಿ ಪ್ರಕರಣಗಳ ಬಗ್ಗೆ ಕೈಗೊಂಡ ಪರಿಶೀಲನೆಯಲ್ಲಿ ಮೃತಪಟ್ಟ 3 ಜನ ಈ ಮೊದಲೇ ತೀವ್ರ ತರಹದ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಸಾವಿಗೆ ಕಲುಷಿತ ನೀರು ಕಾರಣ ಅಲ್ಲ ಎಂಬುವುದು ಆರೋಗ್ಯ ಇಲಾಖೆಯ ವರದಿಯಿಂದ ತಿಳಿದುಬಂದಿದೆ.

ಅಲ್ಲದೆ ಈ ಕುಟುಂಬದ ಇತರ ಸದಸ್ಯರಿಗೆ ಕುಡಿಯುವ ನೀರಿನಿಂದ ಉಂಟಾಗುವ ಯಾವುದೇ ರೀತಿಯ ಅನಾರೋಗ್ಯ ಸಮಸ್ಯೆಗಳು ಕಂಡುಬಂದಿರುವುದಿಲ್ಲ. ಪ್ರಸ್ತುತ ತಿಪ್ಪನಟಗಿ ಗ್ರಾಮಕ್ಕೆ ಪೂರೈಕೆ ಮಾಡುತ್ತಿರುವ ಎಲ್ಲಾ ಜಲಮೂಲಗಳ ಕುಡಿಯುವ ನೀರಿನ ಮಾದರಿಗಳನ್ನು ಭೌತಿಕ, ಜೈವಿಕ, ಹಾಗೂ ರಾಸಾಯನಿಕ ಪರೀಕ್ಷೆಗೆ ಒಳಪಡಿಸಿದ್ದು, ನೀರು ಕುಡಿಯಲು ಯೋಗ್ಯವಿರುವುದಾಗಿ ವರದಿ ಬಂದಿರುತ್ತದೆ.

ಪ್ರಸ್ತುತ ತಿಪ್ಪನಟಗಿ ಗ್ರಾಮದಲ್ಲಿ ಆರೋಗ್ಯ ಕ್ಯಾಂಪ್ ವ್ಯವಸ್ಥೆಯೊಂದಿಗೆ ಮುನ್ನೆಚ್ಚರಿಕೆಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News