×
Ad

ಯಾದಗಿರಿ | ವಿದ್ಯುತ್ ಸಮಸ್ಯೆಯ ವಿರುದ್ಧ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ

Update: 2025-06-25 20:11 IST

ಸುರಪುರ: ತಾಲೂಕಿನ ಹುಣಸಿಹೊಳೆ ಗ್ರಾಮದಲ್ಲಿ ವಿದ್ಯುತ್ ತಂತಿಗಳು ಜೋತು ಬಿದ್ದು ಸಾರ್ವಜನಿಕರು ಅಪಾಯದಲ್ಲಿ ತಿರುಗಾಡುವಂತಾಗಿದೆ ಎಂದು ಆರೋಪಿಸಿ ನಗರದ ರಂಗಪೇಟೆಯ ಜೆಸ್ಕಾಂ ಇಲಾಖೆ ಕಚೇರಿ ಮುಂದೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಿ.ಜಿ.ಸಾಗರ ಬಣ) ಮುಖಂಡರು ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಅನೇಕರು ಮಾತನಾಡಿ, ಹುಣಸಿಹೊಳೆ ಗ್ರಾಮದಲ್ಲಿನ ವಿದ್ಯುತ್ ತಂತಿಗಳು ಜೋತು ಬಿದ್ದಿರುವ ಸಮಸ್ಯೆ ಕುರಿತು ಅನೇಕ ಬಾರಿ ಅಧಿಕಾರಿಗಳಿಗೆ ತಿಳಿಸಿದರೂ ಪ್ರಯೋಜನೆಯಾಗುತ್ತಿಲ್ಲ. ಕೂಡಲೇ ಗ್ರಾಮದಲ್ಲಿನ ಎಲ್ಲಾ ತಂತಿಗಳನ್ನು ಸರಿಪಡಿಸಬೇಕು ಇಲ್ಲವಾದಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನಾ ಸ್ಥಳಕ್ಕೆ ಜೆಸ್ಕಾಂ ಇಲಾಖೆ ಎಇಇ ರಫೀಕ್ ಆಗಮಿಸಿ ಮನವಿ ಸ್ವೀಕರಿಸಿ ಮಾತನಾಡಿ, ಮೂರು ದಿನಗಳಲ್ಲಿ ನಿಮ್ಮ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಕೈ ಬಿಡಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಯ ಉಪ-ವಿಭಾಗೀಯ ಸಂಚಾಲಕ ರಮೇಶ ಬಡಿಗೇರ, ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ, ತಾ.ಅಲ್ಪ ಸಂಖ್ಯಾತರ ಸಂಚಾಲಕ ಎಮ್.ಪಟೇಲ್, ಸಂ.ಸಂಚಾಲಕ ವೆಂಕಟೇಶ ದೇವಾಪುರ, ಶೇಖರ ಮಂಗಳೂರ, ಚನ್ನಬಸಪ್ಪ ದೇವಾಪುರ, ರಾಜು ಬಡಿಗೇರ, ಖಜಾಂಚಿ, ಖಾಜಾ ಅಜ್ಮೀರ್, ಸಿದ್ದಪ್ಪ ಸುರಪುರಕರ್,ಯಲ್ಲಪ್ಪ ರತ್ತಾಳ, ಹಣಮಂತ ರತ್ತಾಳ, ಗ್ಯಾನಪ್ಪ ಕಾಂಬ್ಳೆ, ಮಲ್ಲಪ್ಪ ಮಾಳಳ್ಳಿ, ಮಾನಪ್ಪ ಸುರಪುರ, ನಿಂಗಪ್ಪ ಕಾಂಬ್ಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News