×
Ad

ಯಾದಗಿರಿ | ಡಿಸಿ, ಎಡಿಸಿಗೆ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನ

Update: 2025-07-28 19:02 IST

ಯಾದಗಿರಿ: ಜಿಲ್ಲೆಯಲ್ಲಿ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರ್ಷಲ್ ಬೋಯರ್ ಮತ್ತು ಎಡಿಸಿ ಅವರಿಗೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಸನ್ಮಾನ ಮಾಡಲಾಯಿತು.

ನಂತರ ಜಿಲ್ಲಾ ಕೇಂದ್ರದಲ್ಲಿ ಬಹುದಿನದ ಬೇಡಿಕೆಯಾದ ಡಾ.ಬಿ.ಆರ್.ಅಂಬೇಡ್ಕರ್ ಭವನದ ನಿರ್ಮಾಣದ ಬಗ್ಗೆ ಮತ್ತು ಜಿಲ್ಲೆಯ ಇತರ ವಿಷಯಗಳ ಬಗ್ಗೆ ಚರ್ಚೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕರಾದ ಮರೆಪ್ಪ ಚಟ್ಟೇರಕರ್, ಗೋಪಾಲ ತಳಿಗೇರಿ, ಭೀಮರಾಯ ರಾಕಮಗೇರ, ಬಾಲರಾಜ್ ಖಾನಪೂರು, ಶರಣಪ್ಪ ಅನಸೂಗೂರು, ಸೈದಪ್ಪ ಕೂಲೂರು, ಪರುಶರಾಮ್ ಒಡೆಯರ್, ಬಸವರಾಜ್ ಬೊಳ್ಯಾರಿ, ಹಣಮಂತ ಮಿಲ್ಟ್ರೀ ಇತರರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News