×
Ad

ಯಾದಗಿರಿ | ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿಲ್ಲಾಧಿಕಾರಿಗೆ ಸನ್ಮಾನ

Update: 2025-07-24 21:06 IST

ಯಾದಗಿರಿ: ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಹರ್ಷಲ್ ಬೋಯರ್ ಅವರನ್ನು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಇಂಧುದರ ಸಿನ್ನೂರ್ ಅವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.

ಜಿಲ್ಲೆಯ ಹಲವು ಸಮಸ್ಯೆಗಳಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಇನ್ನಿತರ ಹಲವು ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಜಿಲ್ಲೆಯ ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಜರುಗಿಸಿ ಸಾರ್ವಜನಿಕರ ಅನುಕೂಲತೆಗೆ ಪರಿಹಾರ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.

ಈ ಸಂದರ್ಭದಲ್ಲಿ ವಾರ್ತಾಧಿಕಾರಿ ಸುಲೇಮಾನ್ ನಾಧಾಫ್ ಹಿರಿಯ ಪತ್ರಕರ್ತರಾದ ಸಂಜೀವ್ ರಾವ್ ಕುಲಕರ್ಣಿ, ಶರಣು ಗೊಬ್ಬುರ್, ಎಸ್ ಎಸ್ ಮಠ್, ಆನಂದ್ ಎಮ್ ಸೌದಿ, ಹಣಮಂತು ಪಿ,ಅಂಬರೀಷ್ ಬಿಳಾರ್, ಆನಂದ ಗೊರ್ಕಲ್, ಎಸ್ ಎಸ್ ನಾಯಕ್, ಡಾ.ಭೀಮರಾಯ ಲಿಂಗೇರಿ, ನಾಗಪ್ಪ ಮಾಲಿ ಪಾಟೀಲ್, ರಫೀಕ್ ಸಾಬ್, ಅಮೀನ್ ಹೊಸೂರ್, ವಿಜಯಭಾಸ್ಕರ್ ರಡ್ಡಿ,ಸಾಗರ ದೇಸಾಯಿ,ರವಿರಾಜ್ ಕಂದಳ್ಳಿ, ರಾಜು ನಳ್ಳಿಕರ್, ಶಿವಕುಮಾರ್, ಪರಶುರಾಮ್, ರೂಪೇಶ್ ಹುಲಿಕರ್,ಲಕ್ಷ್ಮಿ ಕಾಂತ್ ಲಿಂಗೇರಿ, ಎಮ್ ಡಿ ರಫೀಕ್ ಪಟೇಲ್, ಮಹೇಶ್ ಗಣೇರ್, ಶರಬು ಬಿ ನಾಟೇಕರ್, ಆಂಜನೇಯ ದೇವರಮನಿ, ಮಲ್ಲು ಕಾಮರಡ್ಡಿ, ಅರುಣ್ ಮಾಸ್ತರ್, ನಾಗರಾಜ, ಕುದಾನ ಸಾಬ್, ಸುಧೀರ್ ಕೋಟೆ, ಸೇರಿದಂತೆ ಇನ್ನಿತರ ಪತ್ರಕರ್ತರು ಭಾಗವಹಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News