ಯಾದಗಿರಿ | ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನವನ್ನು ವಾರಸುದಾರರಿಗೆ ನೀಡಿ ಪ್ರಾಮಾಣಿಕತೆ ಮೆರೆದ ಚಾಲಕ
ಯಾದಗಿರಿ: ಆಟೋದಲ್ಲಿ ಬಿಟ್ಟು ಹೋಗಿದ್ದ ಚಿನ್ನಾಭರಣವನ್ನು ವಾರಸುದಾರರಿಗೆ ಹಸ್ತಾಂತರ ಮಾಡುವ ಮೂಲಕ ಆಟೋ ಚಾಲಕ ಚಂದಪ್ಪ ಹತ್ತಿಕುಣಿ ಎಂಬುವವರು ಪ್ರಾಮಾಣಿಕತೆ ಮೆರೆದಿದ್ದಾರೆ.
ಬ್ಯಾಗ್ ನಲ್ಲಿದ್ದ 5 ತೊಲಿ ಚಿನ್ನಾಭರಣ, ಹತ್ತು ಸಾವಿರ ರೂಪಾಯಿ ಹಾಗೂ ಒಂದು ಐಫೋನ್ ಫೋನ್ ಅನ್ನು ಪ್ರವಾರಸುದಾರರಿಗೆ ಹಸ್ತಾಂತರಿಸಿದ ಚಾಲಕನಿಗೆ ಪೊಲೀಸರು ಸನ್ಮಾನ ಮಾಡಿದ್ದಾರೆ.
ನಗರದ ಸುಭಾಷ್ ವೃತ್ತದಿಂದ ಆಟೋ ಹತ್ತಿದ್ದ ಮಹಮ್ಮದ್ ಖಾಜಾ ಮತ್ತು ಅವರ ಪತ್ನಿ ಷಾಹೀದಾ ಬೇಗಂ ಇಬ್ಬರು ಹತ್ತಿಕುಣಿ ಕ್ರಾಸ್ ವರೆಗೆ ಆಟೋದಲ್ಲಿ ಪ್ರಯಾಣಿಸಿ ಬ್ಯಾಗ್ ಅನ್ನು ಮರೆತು ಇಳಿದು ಹೋಗಿದ್ದರು. ಬ್ಯಾಗ್ ನಲ್ಲಿ ಇದ್ದ ಫೋನ್ ಚಾರ್ಜ್ ಖಾಲಿಯಾಗಿ ಸ್ವಿಚ್ ಆಫ್ ಆಗಿದ್ದ ಕಾರಣ ಸುಮಾರು ಹೊತ್ತು ಆಟೋಗಾಗಿ ಹುಡುಕಾಡಿದ್ದಾರೆ.
ಈ ವೇಳೆ ಆಟೋ ಚಾಲಕ ತನಗೆ ಸಿಕ್ಕಿದ್ದ ಬ್ಯಾಗ್ ಅನ್ನು ಪೋಲಿಸರಿಗೆ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ. ನಂತರ ಪೋಲಿಸರು ಪ್ರಯಾಣಿಕರಿಗೆ ಬ್ಯಾಗ್ ಅನ್ನು ಒಪ್ಪಿಸಿದ ನಂತರ ಪ್ರಾಮಾಣಿಕತೆ ತೋರಿದ ಆಟೋ ಚಾಲಕನಿಗೆ ಪೊಲೀಸ್ ಇಲಾಖೆಯಿಂದ ಉತ್ತಮ ಆಟೋ ಡ್ರೈವರ್ ಎಂದು ಠಾಣೆಯಲ್ಲಿಯೇ ಸನ್ಮಾನಿಸಿ ಅಭಿನಂದನೆ ಸಲ್ಲಿಸಿದ್ದಾರೆ.