×
Ad

ಯಾದಗಿರಿ | ಸ್ವಪಕ್ಷದವರೇ ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿದ್ದಾರೆ : ಛಲವಾದಿ ನಾರಾಯಾಣಸ್ವಾಮಿ

Update: 2025-06-26 20:52 IST

ಯಾದಗಿರಿ: ಸ್ವಪಕ್ಷದ ವಿರುದ್ಧ ಧೈರ್ಯವಾಗಿ ಮಾತನಾಡಲು ಕಾಂಗ್ರೆಸ್ ಪಕ್ಷದಲ್ಲೊಬ್ಬ ಗಂಡು ಇದ್ದಾನೆ ಎಂದು ವಿಧಾನ ಪರಿಷತ್ತಿನ‌ ಪ್ರತಿ ಪಕ್ಷದ ನಾಯಕ ಛಲವಾದಿ ನಾರಾಯಾಣ ಸ್ವಾಮಿ ತಿಳಿಸಿದ್ದಾರೆ.

ಯಾದಗಿರಿಯಲ್ಲಿ ಗುರುವಾರ ವಾರ್ತಾಭಾರತಿಗೆ ಪ್ರತಿಕ್ರಿಯೆ ನೀಡಿದ ಅವರು, ಸರಕಾರವನ್ನು ವಿರೋಧ ಪಕ್ಷದವರಾಗಿ ಸಹಜವಾಗಿ ನಾವು ವಿರೋಧ ಮಾಡುತ್ತೇವೆ. ಆದರೆ, ಸರಕಾರ ನಮ್ಮ ಕಡೆ ಗಮನ ಕೊಡುವುದಿಲ್ಲ, ಆದರೆ ಈಗ ಸ್ವಪಕ್ಷದವರೇ ಪಕ್ಷದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಬಿ.ಆರ್ ಪಾಟೀಲ್ ಒಬ್ಬರೇ ಅಲ್ಲ, ರಾಜು ಕಾಗೆ ಅವರು ಕೂಡ ತಿರುಗಿ ಬಿದ್ದಿದ್ದಾರೆ ಎಂದು ಹೇಳಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದು ತಪ್ಪು ಎಂದು ದೇಶಪಾಂಡೆ ಅವರು ಹೇಳಿದ್ದಾರೆ. ಗ್ಯಾರೆಂಟಿಗಳು ಕೊಡೋದು ತಿಂಗಳ ಸಂಬಳ ಅಲ್ಲ, ಇಷ್ಟ ಬಂದಾಗ ಕೊಡುತ್ತೇವೆ ಎಂದು ಸಚಿವ ಜಾರ್ಜ್ ಅವರು ಹೇಳಿದ್ದಾರೆ. ಹೀಗೆ ಒಬ್ಬರು ಒಂದೊಂದು ಹೇಳಿಕೆ ನೀಡುತ್ತಿದ್ದಾರೆ. ಈಗ ನೋಡಿದರೆ ಸರಕಾರದ ವಿರುದ್ಧ ಸ್ವಪಕ್ಷದವರೇ ತಿರುಗಿ ಬಿದ್ದಿದ್ದು, ಈಗ ಕಾಂಗ್ರೆಸ್ ಸರಕಾರ ಉತ್ತರ ಕೊಡದೆ ಪರಿ ತಪ್ಪಿಸುತ್ತಿದ್ದಾರೆ ಎಂದು ಹೇಳಿದರು.

ಅಂಬೇಡ್ಕರ್ ನಗರದಲ್ಲಿ ಶಾಲಾ ಮಕ್ಕಳ ಕೈಯಿಂದ ಶಾಲಾ ಸ್ವಚ್ಚತಾ ವರದಿ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಾಲೆ ಮತ್ತು ಹಾಸ್ಟೆಲ್ ಗಳಲ್ಲಿ ಮಕ್ಕಳಿಂದ ಸ್ವಚ್ಚತೆ ಮಾಡುವುದು ಬಹಳಷ್ಟು ಕಡೆ ನಡೆಯುತ್ತಿದೆ. ಕೋಲಾರ ಜಿಲ್ಲೆಯಲ್ಲಿ ಕೂಡ ಇಂತಹದ್ದೇ ಒಂದು ಘಟನೆ ನಡೆದಿತ್ತು. ಆ ವೇಳೆ ಅಲ್ಲಿಯ ಶಿಕ್ಷಕರನ್ನು ಕೂಡಲೇ ಅಮಾನತು ಮಾಡಲಾಯಿತು. ಎಲ್ಲಾ ಕಡೆ ಕಾನೂನು ಒಂದೇ ಇರೋದ್ರಿಂದ ಮಕ್ಕಳ ಕೈಯಲ್ಲಿ ಶಾಲಾ ಸ್ವಚ್ಛ ಮಾಡಿಸುವುದು ತಪ್ಪು, ಈ ವಿಷಯವು ಕೂಡ ನನ್ನ ಗಮನಕ್ಕೆ ಬಂದಿದೆ ಮತ್ತು ಪತ್ರಿಕೆಯಲ್ಲಿ ಕೂಡ ನಾನು ನೋಡಿದ್ದೇನೆ, ಈ ರೀತಿ ಮಕ್ಕಳ ಕೈಯಿಂದ ಶಾಲೆ ಸ್ವಚ್ಚತೆ ಮಾಡಿಸಿದವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News