ಯಾದಗಿರಿ | ಜಯ ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ವಿಶ್ವ ಪರಿಸರ ದಿನಾಚರಣೆ
ಯಾದಗಿರಿ : ಜಯ ಕರ್ನಾಟಕ ರಕ್ಷಣಾ ಸೇನೆ ತಾಲೂಕು ಘಟಕದ ವತಿಯಿಂದ ಸುರಪುರ ತಾಲೂಕಿನ ರತ್ತಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯ ನಿಮಿತ್ತವಾಗಿ ಸಸಿ ನೆಡುವುದರ ಮೂಲಕ ಪರಿಸರ ಜಾಗೃತಿ ಹಾಗೂ ಸಸಿ ವಿತರಣೆ ಮಾಡಿ, ವಿಶ್ವ ಪರಿಸರ ದಿನ ಆಚರಿಸಲಾಯಿತು.
ತಾಲೂಕು ಕಾರ್ಯಾಧ್ಯಕ್ಷರಾದ ಶಿವರಾಜ ವಗ್ಗಾರ ಮಾತನಾಡಿ, ಜಯ ಕರ್ನಾಟಕ ರಕ್ಷಣಾ ಸೇನೆ ಸಂಘಟನೆಯು ಸುರಪುರ ತಾಲೂಕಿನಲ್ಲಿ ಹೋರಾಟದ ಜೊತೆಗೆ ಅನೇಕ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಹಾಗೂ ಕನ್ನಡ ನಾಡಿನ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ ಎಂದರು.
ಜಯ ಕರ್ನಾಟಕ ರಕ್ಷಣಾ ಸೇನೆಯ ತಾಲೂಕು ಅಧ್ಯಕ್ಷ ಮಲ್ಲು ನಾಯಕ ಕಬಾಡಗೇರಾ ಅಧ್ಯಕ್ಷತೆ ವಹಿಸಿದ್ದರು. ಎಲ್ಲಾ ಅತಿಥಿಗಳಿಗೆ ಸನ್ಮಾನಿಸಿ, ಶಾಲಾ ಮಕ್ಕಳಿಗೆ ಪರಿಸರ ಜಾಗೃತಿ ಮೂಡಿಸುವ ಮೂಲಕ ಸಸಿಗಳನ್ನು ಹಂಚಲಾಯಿತು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ವಿನಾಯಕ ರಂಜಣಿಗಿ ಕೃಷಿ ಅಧಿಕಾರಿಗಳು ಸುರಪುರ, ಚಂದ್ರಶೇಖರ್ ಕೃಷಿ ಇಲಾಖೆ, ರಾಮಣ್ಣ ಸಿ ಆರ್ ಪಿ, ಮಹಿಳಾ ಘಟಕದ ಅಧ್ಯಕ್ಷರಾದ ಲಕ್ಷ್ಮೀ ಎಂ.ನಾಯಕ, ಕಾರ್ಯದರ್ಶಿ ಕೃಷ್ಣ ಹಾವಿನ ಕುಂಬಾರಪೆಟ, ತಿಪ್ಪಣ್ಣ ಪೊಲೀಸ್ ಪಾಟೀಲ್, ಡಿಎಸ್ಎಸ್ ಮುಖಂಡರಾದ ರಾಜು ಬಡಿಗೇರ್, ತಿಪ್ಪಣ್ಣ ಶೆಳ್ಳಗಿ, ಎಂ.ಪಾಟೇಲ್, ಚೆನ್ನಪ್ಪ ದೇವಾಪುರ, ವೆಂಕಟೇಶ ದೇವಾಪುರ, ಶೇಖರ ಮಂಗಳೂರು, ರಮೇಶ್ ಬಾಚಿಮಟ್ಟಿ, ಖಾಜಸಾಬ್, ಜಯ ಕರ್ನಾಟಕ ರಕ್ಷಣಾ ಸೇನೆ ಸಂಚಾಲಕರಾದ ರಾಘು ಗೋಗಿಕೇರಾ, ಹನುಮಂತ ಭಂಡಾರಿ, ನಗರ ಘಟಕ ಅಧ್ಯಕ್ಷ ಶಿವಕುಮಾರ್, ರಾಘವೇಂದ್ರ, ಎಸ್ ಡಿ ಎಂ ಸಿ ಅಧ್ಯಕ್ಷ ಮರೆಪ್ಪ, ಉಪಾಧ್ಯಕ್ಷ ಯಲ್ಲಪ್ಪ, ಡಾ.ಕಲ್ಯಾಣ ಸ್ವಾಮಿ, ಸದಸ್ಯರಾದ ಯಲ್ಲಪ್ಪ ಭಂಡಾರ, ರವಿ ಟರ್ಕಿ, ನಾಗರಾಜ್ ನಂಬಾ, ಗಣಪತಿ ರತ್ತಾಳ, ಹುಸೇನಿ ತಿಮ್ಮಾಪುರ, ಸಿದ್ದು ಮಡಿವಾಳ, ಸಿದ್ದು ತುಮಕೂರು, ಹನುಮಂತ ಶುಕ್ಲ, ಬಲಭೀಮ ಕಬಾಡಗೇರಾ, ರಫೀಕ್ ತಿಮ್ಮಾಪುರ, ಮಹಾಂತೇಶ್, ಮರೆಪ್ಪ ಕೃಷ್ಣಾಪುರ, ಸೋಮು ರತ್ತಾಳ ಮತ್ತು ಗ್ರಾಮಸ್ಥರು ಹಾಗೂ ಅನೇಕ ಮುಖಂಡರು ಭಾಗವಹಿಸಿದ್ದರು.