ಯಾದಗಿರಿ | ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ, ಚಿತ್ರನಟ ಟೆನ್ನಿಸ್ ಕೃಷ್ಣ ಅವರಿಗೆ ಸನ್ಮಾನ
Update: 2025-06-20 21:29 IST
ಸುರಪುರ: ನಗರಕ್ಕೆ ಕನ್ನಡ ಸೇನೆ ಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಕೆ.ಆರ್ ಕುಮಾರ ಹಾಗೂ ಚಿತ್ರನಟ ಟೆನ್ನಿಸ್ ಕೃಷ್ಣ ಆಗಮಿಸಿದ್ದರು.
ಸಂಘಟನೆಯ ತಾಲೂಕು ಘಟಕದ ಮುಖಂಡರು ನಗರದ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ವೃತ್ತದಲ್ಲಿ ಸ್ವಾಗತಿಸಿ ಮೊದಲಿಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕರ ಮೂರ್ತಿಗೆ ಮಾಲಾರ್ಪಣೆ ಮಾಡಿ, ನಂತರ ಜನ್ಮ ದಿನಾಚರಣೆ ಅಂಗವಾಗಿ ಕೆ.ಆರ್ ಕುಮಾರ ಹಾಗೂ ಟೆನ್ನಿಸ್ ಕೃಷ್ಣ ಮತ್ತು ಇತರೆ ಮುಖಂಡರನ್ನು ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಮುಖಂಡರಾದ ಎಮ್.ಮಹಾದೇವ, ರಾಜೇಗೌಡ ಚಿಕ್ಕಮಂಗಳೂರ, ಮುನಿಕೃಷ್ಣಗೌಡ, ವೆಂಕಟಪ್ಪ ಕೋಲಾರ, ಕೊಪ್ಪಳ ಜಿಲ್ಲಾಧ್ಯಕ್ಷ ಚನ್ನಬಸವ ಜೇಕಿನ್, ಕ.ಕ ವಿಭಾಗೀಯ ಸಂ.ಕಾರ್ಯದರ್ಶಿ ದೇವು ಭೀಗುಡಿ, ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಗನೂರ, ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಹೊಸಮನಿ, ನಗರ ಘಟಕ ಅಧ್ಯಕ್ಷ ಅಕ್ಷಯ್ ಕಟ್ಟಿಮನಿ, ರವೀಂದ್ರನಾಥ ಬಡಗ, ಶಿವಕುಮಾರ ಹಿರೇಮಠ ಸೇರಿದಂತೆ ಅನೇಕರು ಭಾಗವಹಿಸಿದ್ದರು.