×
Ad

ಯಾದಗಿರಿ | ಭಾವಗೀತೆಗಳು ಕೇಳುವುದರಿಂದ ಮನಸ್ಸಿನ ಒತ್ತಡ ದೂರವಾಗುತ್ತದೆ : ಸುರೇಶ್‌ ತಡಿಬಿಡಿ

Update: 2025-06-29 18:48 IST

ಯಾದಗಿರಿ: ಭಾವಗೀತೆಗಳು ಮನಸನ್ನು ಶಾಂತವಾಗಿಸುತ್ತದೆ ಮತ್ತು ಒತ್ತಡ ನಿಯಂತ್ರಣಕ್ಕೆ ತರುವ ಶಕ್ತಿ ಇದೆ ವಸತಿ ನಿಯಲದ ಪ್ರಾಂಶುಪಾಲ ಸಂಘದ ಜಿಲ್ಲಾಧ್ಯಕ್ಷ ಸುರೇಶ ತಡಿಬಿಡಿ ಹೇಳಿದರು.

ನಗರದ ಲಕ್ಣ್ಮೀ ದೇವಸ್ಥಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಾಹಿತಿ ಅಳ್ಳೆಳಪ್ಪ ಜಿ.ಪೂಜಾರಿ ಅವರ ರಚಿಸಿದ ಭಾವಗೀತೆಗಳ ಧ್ವನಿ ಸುರಳಿ ಬಿಡುಗಡೆ ಮಾಡಿ ಮಾತನಾಡಿದರು.

ಸಂಗೀತ ಪ್ರತಿ‌ಮನುಷ್ಯನ ಜೀವನಾಡಿ. ಅದಕ್ಕೆ ರೋಗ ಕಳೆಯುವ ಶಕ್ತಿ ಇದೆ. ಅದರಲ್ಲೂ ಭಾವಗೀತೆಗಳು ಮನುಷ್ಯರ ಬದುಕಿನ ಅನೇಕ ವಿಷಯಗಳ ಕುರಿತಾಗಿ ರಚನೆಯಾಗಿದ್ದರಿಂದ ಇವುಗಳನ್ನು ಕೇಳುವ ಮೂಲಕ ಒತ್ತಡರಹಿತ ಜೀವನ ಎಲ್ಲರದ್ದು ಆಗಬೇಕೆಂದರು.

ಕರ್ನಾಟಕ ವಸತಿ ಶಿಕ್ಷಣ ಸಂಸ್ಯೆಯ ಸಂಘದ ಜಿಲ್ಲಾಧ್ಯಕ್ಷ ಅಶೋಕ ರಾಜನಕೋಳ್ಳೂರ, ಅಧ್ಯಕ್ಷತೆ ವಹಿಸಿ ಸಾಹಿತಿ ಅಳ್ಳೆಳಪ್ಪ ಬಿ. ಪೂಜಾರಿ ಮಾತನಾಡಿದರು.

ಯರಮಸಳ ಗುರು ನಾಗಪ್ಪ ಪೂಜಾರಿ, ಮುಹಮ್ಮದ್ ಗೌಸ್ ಮುತ್ಯಾ ಅವರು ಸಾನಿಧ್ಯ ವಹಿಸಿದ್ದರು.

ಕಾರ್ಯಕ್ರಮದಲ್ಲಿ ನಾಗರೆಡ್ಡಿ, ಮಾರತಿ ಕಲಾಲ್ ಅಬ್ದುಲ್‌ ವಾಬ್, ವಕೀಲರಾದ ನಾಗರಾಜ ಬಿರನೂರ್, ಪತ್ರರ್ತರಾದ ಮಹೇಶ ಕಲಾಲ್, ಸಿದ್ರಾಮಪ್ಪ ಕಟ್ಟಿಮನಿ, ಸಿದ್ದಪ್ಪ ಪೂಜಾರಿ,‌ಮಹೇಶ ಪತ್ತಾರ್ ಸೇರಿದಂತೆ ಇತರರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News