ಯಾದಗಿರಿ | ಸೇವಾ ನಿವೃತ್ತಿ ಜೀವನ ಸುಖಕರವಾಗಿರಲಿ : ಮಹಾಂತಪ್ಪ ಮಹಾಗಾವ್
ಯಾದಗಿರಿ: ಸದಾ ಕೆಲಸದ ಒತ್ತಡದಿಂದ ಬಹು ವರ್ಷಗಳ ಕಾಲ ಇಲಾಖೆ ಹಾಗೂ ರೈತರ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿ ಅನನ್ಯ ಸೇವೆ ಸಲ್ಲಿಸಿದ ಕುರುಕಳ್ಳಿ ಅವರ ಜೀವನ ಕೊನೆಯವರೆಗೂ ಸುಖಶಾಂತಿಯಿಂದ ನೆಲಸಲಿ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹಾಂತಪ್ಪ ಮಹಾಗಾವ್ ಆಶಿಸಿದರು.
ಗುರುವಾರ ನಗರದ ಸ್ಟೇಷನ್ ರಸ್ತೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಉಪವಿಭಾಗ ಕಛೇರಿಯಲ್ಲಿ ಕರ್ನಾಟಕ ಕ್ಷೆಮಾಭಿವೃದ್ಧಿ ದಿನಗೂಲಿ ನೌಕರ ಕೆಲಸ ನಿರೀಕ್ಷಕ ಇಮ್ಮನುವೇಲ್ ಕುರುಕಳ್ಳಿ ದಂಪತಿಗಳಿಗೆ ಸನ್ಮಾನಿಸಿ ಮಾತನಾಡಿದ ಅವರು, ಸತತವಾಗಿ 41 ವರ್ಷಗಳ ಕಾಲ ನಿರಂತರ ಸೇವೆ ಸಲ್ಲಿಸಿ ಉತ್ತಮ ಹಾಗೂ ದಕ್ಷತೆ ಮೇರೆಗೆ ಕಾರ್ಯ ನಿರ್ವಸಿದ ಕೀರ್ತಿ ಇಮ್ಮಾನುವೆಲ್ ಕುರುಕಳ್ಳಿದ್ದಾಗಿದೆ ಮುಂದಿನ ನಿವೃತ್ತಿ ಜೀವನ ಸಂತೋಷ ನೆಮ್ಮದಿಯಿಂದ ಕೂಡಿರಲಿ ಎಂದರು.
ಸಹಾಯಕ ಅಭಿಯಂತರಾದ ಮೃತ್ಯುಂಜಯ ಕಟ್ಟಿಮನಿ,ಸತೀಶ್ ಉಪ್ಪಿನ್, ಮಂಜುನಾಥ್, ಕಾವೇರಿ, ಕಿರಿಯ ಅಭಿಯಂತರರಾದ ರವಿ, ಶ್ರೀನಿವಾಸ್, ಗುರುರಾಜ್, ಪ್ರಥಮ ದರ್ಜೆ ಸಹಾಯಕ ನಾಗರಾಜ ಡೊಣ್ಣೋರ್, ದ್ವಿತೀಯ ದರ್ಜೆ ಸಹಾಯಕರಾದ ಚಾಂದ್ ಸಾಬ್, ಬಸವರಾಜ್, ಮೊದಿನ್ ಕಿಲ್ಲನಕೇರಾ ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಸವರಾಜ್ ಮಾಲಿ ಪಾಟೀಲ್ ತಾಲುಕು ಪಂಚಾಯತ್ ಮಾಜಿ ಸದಸ್ಯ ಹಣಮಂತ ಲಿಂಗೇರಿ, ಜೋಸೆಫ್ ಮಾಸ್ಟರ್,ವಿಜಯ ಬೆನಕಲ್, ಜಾನ್ಸನ್ ತಂಗಡಗಿ,ವಿಜಯಕುಮಾರ್ ಮಾಳಿಕೇರಿ, ನಿವೃತ್ತ ಶಿಕ್ಷಕ ಸೊಪಣ್ಣ, ಪರವಸ್ತಯ್ಯಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.