ಯಾದಗಿರಿ | ಜಿಲ್ಲಾ ಆಸ್ಪತ್ರೆಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಭೇಟಿ, ವಿವಿಧ ಕಾಮಗಾರಿಗಳ ಪರಿಶೀಲನೆ
ಯಾದಗಿರಿ: ಇಲ್ಲಿನ ಜಿಲ್ಲಾ ಆಸ್ಪತ್ರೆಗೆ ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಗುರುವಾರ ಭೇಟಿ ನೀಡಿ, ಅಲ್ಲಿ ನಡೆದಿರುವ ವಿವಿಧ ಕಾಮಗಾರಿಗಳನ್ನು ಮತ್ತು ಆಸ್ಪತ್ರೆ ಕೋಣೆಗಳನ್ನು ಪರಿಶೀಲಿಸಿದರು.
ಈ ವೇಳೆ ಹಾಜರಿದ್ದ ಮೆಡಿಕಲ್ ಕಾಲೇಜಿನ ಡಿನ್ ಡಾ.ಸಂದೀಪ್ ಅವರು, ಆಸ್ಪತ್ರೆಯಲ್ಲಿ ನಡೆಯುತ್ತಿರುವ ಒಳಚರಂಡಿ ಕೆಲಸ, ಕೋಣೆಗಳ ದುರಸ್ತಿ ಸೇರಿದಂತೆಯೇ ವಿವಿಧ ಕೆಲಸಗಳ ಬಗ್ಗೆ ಶಾಸಕರಿಗೆ ಮಾಹಿತಿ ನೀಡಿದರು.
ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡುವ ಮೂಲಕ, ಅವಶ್ಯವಾಗಿ ಬೇಕಾದ ಕೆಲಸಗಳನ್ನು ಮಾಡಿಸಲಾಗುತ್ತಿದೆ ಎಂದು ಡಿನ್ ಸಂದೀಪ್ ಶಾಸಕರಿಗೆ ಹೇಳಿದರು.
ರೋಗಿಗಳಿಗೆ ತೊಂದರೆಯಾಗದಂತೆಯೇ ಚಿಕಿತ್ಸೆ ನೀಡಬೇಕು. ಇನ್ನೂ ಏನಾದರೂ ಅವಶ್ಯ ಕೆಲಸಗಳು ಆಗಬೇಕಾದರೇ ತಿಳಿಸಿದರೇ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದೆಂದು ಶಾಸಕರು ಹೇಳಿದರು.
ಕ್ಯಾಂಟಿನ್ ಉದ್ಘಾಟನೆ:
ಇದೆ ವೇಳೆ ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರು ಕ್ಯಾಂಟಿನ್ ಉದ್ಘಾಟಿಸಿದರು. ರುಚಿಯಾದ ಮತ್ತು ಗುಣಮಟ್ಟದ ಉಪಹಾರ ನೀಡಬೇಕೆಂದರು.
ಡಿಎಸ್ ಡಾ. ರೀಜ್ವಾನ್ ಆಫ್ರಿನ್, ವಿವಿಧ ವಿಭಾಗಳ ವೈದ್ಯರು ಮತ್ತು ಸಿಬ್ಬಂದಿ ಇದ್ದರು.