×
Ad

ಯಾದಗಿರಿ | ಕುರಕುಂದಾ ಗ್ರಾಮಕ್ಕೆ ಶಾಸಕ ತುನ್ನೂರು ಭೇಟಿ, ಮೃತ ಮಕ್ಕಳಿಗೆ ಅಂತಿಮ‌ ನಮನ ಸಲ್ಲಿಸಿ ಸಾಂತ್ವನ

Update: 2025-07-31 19:04 IST

ಯಾದಗಿರಿ: ಬೆಂಗಳೂರಿನಲ್ಲಿ ಮೃತಪಟ್ಟ ಯಾದಗಿರಿ ಮತಕ್ಷೇತ್ರ ಕುರಕುಂದಾ ಗ್ರಾಮದ ಚಾಂದಪಾಷಾ ಎಂಬುವವರ ಮಕ್ಕಳ ಕಳಬರಹಕ್ಕೇ ಅಂತಿಮ‌ ನಮನ ಸಲ್ಲಿಸಿದ ಶಾಸಕ ಚೆನ್ನಾರೆಡ್ಡಿ ಪಾಟೀಲ್ ಅವರು, ಚಿಕ್ಕ ಮಕ್ಕಳ ಸಾವು ದುಖಃ ತಂದಿದೆ. ಹೆತ್ತವರ ಮುಂದೆ ಮಕ್ಕಳು ಸಾಯಿಬಾರದು, ಆ ದುಖಃಕ್ಕೆ ಕೊನೆಯೇ ಇಲ್ಲ, ಆದರೂ ಧೈರ್ಯದಿಂದ ಇದ್ದು ಜೀವನ ನಡೆಸಿರಿ ಎಂದು ಸಾಂತ್ವನ ಹೇಳಿದರು.

ಗ್ರಾಮದ ಅವರ ಮನೆಗೆ ತೆರಳಿದ್ದ ಶಾಸಕರು ಮಕ್ಕಳನ್ನು ಕಳೆದುಕೊಂಡ ಹೆತ್ತವರ ದುಖಃ ಕಂಡು ಮರುಗಿದರು. ನಾನು ಮಾಡುವ ಈ ವೈಯಕ್ತಿಕ ಸಹಾಯ ದೊಡ್ಡದಲ್ಲ, ಈ ಬಗ್ಗೆ ಸಿಎಂ ಗಮನಕ್ಕೆ ತಂದು ಹೆಚ್ಚಿನ‌ ಸಹಾಯ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದೆಂದರು.

ಈ ವೇಳೆ ಕಾಸೀಮ ಮುತ್ತ್ಯಾ, ಡಾ.ರಾಜು ಬೆಳಗೇರಿ, ಕಾಶೀಮ್ ಗುಲಾಮಿ, ಮಕಧುಮ್, ಶರಣಬಸವ ಕುರಕುಂದಿ, ಮೆಹಬೂಬ್, ಶರಣ ಗೌಡ, ಬಸನಗೌಡ, ಅಂಬ್ರೆಷ್, ರಫಿ ಬೆಳಗೇರ, ಮೋಸಪ್ಪಾ, ಹಾಗೂ ಕುರಕುಂದಿ ಗ್ರಾಮಸ್ಥರು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News