×
Ad

ಯಾದಗಿರಿ | ದ್ವಿಭಾಷಾ ನೀತಿ ಜಾರಿಗೆ ತರಲು ಒತ್ತಾಯಿಸಿ ಕರವೇಯಿಂದ ಪ್ರತಿಭಟನೆ

Update: 2025-07-08 20:09 IST

ಯಾದಗಿರಿ: ರಾಜ್ಯದಲ್ಲಿ ದ್ವಿಭಾಷಾ ನೀತಿ ಜಾರಿಗೆ ತರಲು ಒತ್ತಾಯಿಸಿ ಕರವೇ ಜಿಲ್ಲಾ ಘಟಕದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ಈ ವೇಳೆ ಜಿಲ್ಲಾಧ್ಯಕ್ಷ ಟಿ.ಎನ್.ಭೀಮು ನಾಯಕ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ಕರ್ನಾಟಕ ರಾಜ್ಯದ ಪಠ್ಯಕ್ರಮದಲ್ಲಿ ಸಾಧಾರಣವಾಗಿ ಕನ್ನಡವನ್ನು ಪ್ರಥಮ ಭಾಷೆಯಾಗಿ, ದ್ವಿತೀಯ ಭಾಷೆಯಾಗಿ ಇಂಗ್ಲಿಷನ್ನು ಮತ್ತು ತೃತೀಯ ಭಾಷೆಯಾಗಿ ಹಿಂದಿಯನ್ನು ಕಲಿಸಲಾಗುತ್ತಿದೆ. ರಾಜ್ಯ ಪಠ್ಯಕ್ರಮದಲ್ಲಿ ಓದುವ ಮಕ್ಕಳು ಮೂರನೇ ಭಾಷೆಯಾಗಿ ಹಿಂದಿ ಕಲಿಯುವುದು ಕಡ್ಡಾಯವಾಗಿದೆ. ಮಾತ್ರವಲ್ಲ ಪರೀಕ್ಷೆಯಲ್ಲಿ ನೂರು ಅಂಕಗಳಿಗೆ ಹಿಂದಿ ಪರೀಕ್ಷೆಯನ್ನು ಕಡ್ಡಾಯವಾಗಿ ಬರೆಯಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕರವೇ ಮುಖಂಡರಾದ ಸಿದ್ದುನಾಯಕ ಸಂತೋಷಕುಮಾರ ಹತ್ತಿಕುಣಿ, ನಿರ್ಮಲಕರ್, ಅಂಬರೇಶ ಹತ್ತಿಮನಿ, ಚೌಡಯ್ಯ ಬಾವೂರು, ಯಮನಯ್ಯ ಗುತ್ತೇದಾರ, ವಿಶ್ವರಾಜ ಪಾಟೀಲ, ಶರಣಬಸಪ್ಪ ಯಲ್ಲೇರಿ, ಶರಣಪ್ಪ ದಳಪತಿ ಶೆಟ್ಟಿ ಗೇರಾ, ಹಣಮಂತ ವಾನಳ್ಳಿ, ಅರ್ಜುನ ಪವಾರ, ಹಣಮಂತ ಅಬೋಳ, ಪ್ರಕಾಶ ಪಾಟೀಲ ಜೈಗ್ರಾಮ, ಸಿಲ್ವರಂ, ಕೈಮರಪ್ಪ ರಾಮಸಮುದ್ರ, ಎಸ್‌.ಶರಣದ್‌ ಕಾನಳ್ಳಿ, ಶರಣದ ಕಾಳುದಳ್ಳಿ, ಎಸ್‌. ಹಣಮಂತ ತೇಕರಾಳ, ಹುಲಗಪ್ಪ ಬಜಂತ್ರಿ, ಸಿದ್ದಲಿಂಗ ರೆಡ್ಡಿ ಮುನಗಲ್, ಸುರೇಶ ಬೆಳಗುಂದಿ, ಸಿದ್ದು ಪೂಜಾರಿ ತುಮಕೂರು, ಮಲ್ಲಿಕಾರ್ಜುನ ಕನ್ನಡಿ, ನಾಗರಪ್ಪ, ಗೋಲಪಪ್ಪ ಮಾದರ, ಮಹೇಶ ಠಾಣಗುಂದಿ, ನಾಗರಾಜ ತಾಂಡೂಲ್ಕರ್, ಬಸವರಾಜ ಜಗನಾಥ, ಅಬ್ದುಲ್ ರಿಯಾಜ್, ಕಾಶಿನಾಥನಾಯಕ್ ನಾನೇಕ, ಕಾಶಿನಾಥನಾಯಕ್ ನಾನೇಕ, ಕಾಶಿನಾಥನಾಯಕ್ ನಾನೇಕ, ಶರಣುಕ್ ಎಂ. ಮರೆಪ್ಪ ಕಡ್ಡಿ, ಮಂಜುಳಿ ನಾಗೌಡಿ, ಶರಣು, ಶರಣು, ಪಿಳ್ಳೈ, ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News