ಯಾದಗಿರಿ | ಸಂಚಾರಿ ವಿಜ್ಞಾನ ಪ್ರಯೋಗಲಾಯದ ಲಾಭ ಪಡೆಯಿರಿ: ಜಿಪಂ ಸಿಇಓ ಲವೀಶ್ ಓರಡಿಯಾ ಕರೆ
Update: 2025-07-04 18:12 IST
ಯಾದಗಿರಿ: ಸಂಚಾರಿ ವಿಜ್ಞಾನ ಪ್ರಯೋಗಲಾಯದ ಲಾಭವನ್ನು ಎಲ್ಲ ಮಕ್ಕಳಿಗೆ ಸಿಗುವಂತೆಯೇ ಕಲ್ಪಿಸಬೇಕೆಂದು ಜಿಪಂ ಸಿಇಓ ಲವೀಶ್ ಓರಡಿಯಾ ಹೇಳಿದರು.
ಶುಕ್ರವಾರ ಜಿಪಂ ಕಚೇರಿ ಬಳಿ ಇದರ ಸಂಚಾರಿ ವಾಹನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಪ್ರಯೋಗಲಾಯದ ಲಾಭ ಸುರಪುರ ತಾಲೂಕಿಗೆ ಇದ್ದು, ಅಲ್ಲಿನ ಸರ್ಕಾರಿ ಶಾಲೆಗಳ 6,7 ನೇ ತರಗತಿ ಮಕ್ಕಳಿಗೆ ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತು ಕಲಿಕೆ ಮತ್ತು ಪ್ರಯೋಗಲಾಯಗಳ ಮೂಲಕ ಕಲಿಸಲಾಗುತ್ತದೆ ಎಂದರು.
ಮೂರು ವರ್ಷಗಳ ಯೋಜನೆ ಇದಾಗಿದ್ದು, ಸುರಪುರ ತಾಲೂಕಿನ ಪ್ರತಿ ಸರ್ಕಾರಿ ಶಾಲೆಗೆ ವರ್ಷಕ್ಕೆ ಎಂಟು ಸಲ ಈ ಸಂಚಾರಿ ಪ್ರಯೋಗಲಾಯದ ವಾಹನ ಭೇಟಿ ನೀಡುವ ಮೂಲಕ ಮಕ್ಕಳಿಗೆ ಕಲಿಸಲಾಗುವುದೆಂದು ಹೇಳಿದರು.
ಇದರಲ್ಲಿ ಇಬ್ಬರು ಶಿಕ್ಷಕರು ನಿರಂತರವಾಗಿ ಇದ್ದು, ಕಲಿಕೆ ಕೆಲಸ ಮಾಡುತ್ತಾರೆಂದರು.
ಎಸ್ ಪಿ ಪ್ರಥ್ವಿಕ್ ಶಂಕರ್ ಮಾತನಾಡಿ, ಮಕ್ಕಳು ಇದರ ಲಾಭ ಪಡೆಯುವ ಮೂಲಕ ವಿಜ್ಞಾನ ಮತ್ತು ಗಣಿತದಲ್ಲಿ ಹೆಚ್ಚಿನ ಜ್ಞಾನ ಪಡೆಯಬೇಕೆಂದರು.