ಯಾದಗಿರಿ | ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಮೋಘ : ಸಿದ್ದಪ್ಪ ಹೊಟ್ಟಿ
ಯಾದಗಿರಿ: ಸಮಾಜಕ್ಕೆ ಪತ್ರಕರ್ತರ ಕೊಡುಗೆ ಅಮೋಘವಾಗಿದ್ದು, ಇದು ಎಲ್ಲಾ ವೃತ್ತಿಗಿಂತಲೂ ಪವಿತ್ರವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿದ್ದಪ್ಪ ಹೊಟ್ಟಿ ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಪತ್ರಿಕಾ ಭವನದಲ್ಲಿ ಸೋಮವಾರ ನಡೆದ ಪತ್ರಕರ್ತ ಪ್ರವೀಣಕುಮಾರ್ ಅವರ ಬೀಳ್ಕೊಡುಗೆ ಮತ್ತು ಪತ್ರಕರ್ತ ಮಲ್ಲಿಕಾರ್ಜುನ ನಾಲವಾರ ಅವರ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಪತ್ರಿಕೋದ್ಯಮದ ಮೌಲ್ಯಗಳನ್ನು ಕಾಪಾಡುವುದು ಅಗತ್ಯವಿದೆ. ಇದನ್ನು ಎಲ್ಲ ಪತ್ರಕರ್ತರು ಗಂಭೀರವಾಗಿ ಪರಿಗಣಿಸಬೇಕು. ನಿರ್ಲಕ್ಷ್ಯ ವಹಿಸಿದರೆ ಸಮಾಜದ ಮೇಲೆ ವ್ಯತಿರಿಕ್ತವಾದ ಪರಿಣಾಮ ಬೀರುತ್ತದೆ ಎಂದರು.
ಪತ್ರಕರ್ತ ಪ್ರವೀಣಕುಮಾರ್, ಪತ್ರಕರ್ತ ಶರಣು ಗೊಬ್ಬುರ್, ಪತ್ರಕರ್ತ ಪ್ರವೀಣ್ ಕುಮಾರ್, ಪತ್ರಕರ್ತ ಮಲ್ಲಿಕಾರ್ಜುನ ನಾಲವಾರ, ಸಂಘದ ಉಪಾಧ್ಯಕ್ಷ ರಾಜು ನಲ್ಲಿಕರ್, ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿದರು.
ಉಭಯ ಪತ್ರಕರ್ತರಿಗೆ ಹಲವು ಸಂಘ ಸಂಸ್ಥೆಗಳ ಮುಖಂಡರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಾಜೀದ್ ಹಯ್ಯಾತ್, ಗಣೇಶ್ ಪಾಟೀಲ್, ಪರಶುರಾಮ ಐಕೂರು, ಅಮೀನ್ ಹೊಸೂರು, ರವಿರಾಜ ಕಂದಳ್ಳಿ, ನಾಗರಾಜ ಮಗದುಮ, ದೇವರಾಜ ನಾಯಕ ವರ್ಕನಳ್ಳಿ, ನಾಗಪ್ಪ ನಾಯ್ಕಲ್, ವಿರುಪಾಕ್ಷಯ್ಯ ಸ್ವಾಮಿ ಹೆಡಗಿಮದ್ರಾ, ನಾಗರಾಜ ಬೀರನೂರ, ಉಮೇಶ ಮುದ್ನಾಳ್, ಮರೆಪ್ಪ ನಾಯಕ ಮದಗಂಪುರ, ಬಸವರಾಜ ಕಾಂಬಳೆ, ಅರುಣ ಮಾಸನ್, ನಾಗರಾಜಗೌಡ ಬಿಳ್ಹಾರ, ಭೀರಲಿಂಗಪ್ಪ, ಮಹೇಶ್ ಗಣೇರ್ ಸೇರಿದಂತೆ ಇನ್ನಿತರರಿದ್ದರು.