×
Ad

ಯಾದಗಿರಿ | ಭೀಮಾ ನದಿಯಲ್ಲಿ ಯುವಕರಿಬ್ಬರು ನೀರು ಪಾಲು : ಘಟನಾ ಸ್ಥಳಕ್ಕೆ ಮಹೇಶ್‌ರಡ್ಡಿ ಮುದ್ನಾಳ ಭೇಟಿ

Update: 2025-06-28 17:07 IST

ಯಾದಗಿರಿ: ಯಾದಗಿರಿ ವಿಧಾನಸಭಾ ಕ್ಷೇತ್ರದ ವಡಗೇರಾ ತಾಲೂಕಿನ ಮಾಚನೂರ ಗ್ರಾಮದಲ್ಲಿ ಹಸುಗಳನ್ನು ಮೇಯಿಸಲು ಹೋಗಿದ್ದ ರಮೇಶ ಮತ್ತು ಸಿದ್ದಪ್ಪ ಅವರು ಭೀಮಾ ನದಿಯಲ್ಲಿ ಕಾಲು ಜಾರಿ ನೀರು ಪಾಲಾದ ಘಟನಾ ಸ್ಥಳಕ್ಕೆ ಬಿಜೆಪಿ ಯುವ ಮುಖಂಡರ ಮಹೇಶರಡ್ಡಿ ಮುದ್ನಾಳ ಅವರು ಭೇಟಿ ನೀಡಿದರು.

ಸ್ಥಳದಲ್ಲಿದ್ದ ಕಂದಾಯ ಅಧಿಕಾರಿಗಳ ಮತ್ತು ಅಗ್ನಿಶಾಮಕ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ, ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.

ಈ ಸಂದರ್ಭದಲ್ಲಿ ಹಿರಿಯ ಮುಖಂಡ ಸಿದ್ದಣ್ಣಗೌಡ ವಡಿಗೇರಿ, ವಿರೂಪಾಕ್ಷಪ್ಪಗೌಡ ಮಾಚನೂರ್, ಹನುಮಂತರಾಯ ಗೌಡ ಮಾಚನೂರ, ನಗರಸಭೆ ಮಾಜಿ ಅಧ್ಯಕ್ಷ ವಿಲಾಸ್ ಪಾಟೀಲ್, ಸ್ವಾಮಿದೇವ ದಾಸನಕೇರಿ, ಮಲ್ಲಿಕಾರ್ಜುನರೆಡ್ಡಿ ಪೊಲೀಸ್ ಪಾಟೀಲ್ ವಡಿಗೇರಿ, ಮುಹಮ್ಮದ್ ಕುರೆಶಿ ವಡಿಗೇರಿ, ಸಂಗರೆಡ್ಡಿ ಗೋಡಿಯಾಲ, ಸಿದ್ದು ಮಾಚನೂರ, ಮತ್ತು ಗ್ರಾಮದ ನೂರಾರು ಜನರು ಸ್ಥಳದಲ್ಲಿ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News