ಯಾದಗಿರಿ | ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ಇಬ್ಬರು ಯುವಕರು ನೀರು ಪಾಲು
Update: 2025-06-27 18:39 IST
ಯಾದಗಿರಿ: ಜಾನುವಾರುಗಳಿಗೆ ನೀರು ಕುಡಿಸಲು ಹೋಗಿದ್ದ ಇಬ್ಬರು ಯುವಕರು ಭೀಮಾ ನದಿಯಲ್ಲಿ ಕೊಚ್ಚಿ ಹೋಗಿರುವ ಘಟನೆ ಜಿಲ್ಲೆಯ ವಡಗೆರಾ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.
ಮಾಚನೂರ್ ಗ್ರಾಮದ ಸಿದ್ದಪ್ಪ (20) ಮತ್ತು ರಾಮು (18) ಎಂಬ ಯುವಕರು ನೀರುಪಾಲಾದ ಯುವಕರು ಎಂದು ತಿಳಿದು ಬಂದಿದೆ.
ಜಾನುವಾರಗಳಿಗೆ ನೀರು ಕುಡಿಸಲು ಭೀಮಾ ನದಿಯ ಬಳಿ ಹೋಗಿದ್ದ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಸಿದ್ದಪ್ಪನಿಗೆ ಈಜು ಬರುತ್ತಿರಲಿಲ್ಲ. ನೀರಿಗೆ ಬಿದ್ದಾ ಸಿದ್ದಪ್ಪನನ್ನು ಕಾಪಾಡಲು ಹೋಗಿರಾಮು ಕೂಡ ನೀರುಪಾಲಾಗಿದ್ದಾನೆ ಎಂದು ತಿಳಿದು ಬಂದಿದೆ.
ಯುವಕರು ನೀರು ಪಾಲಾದ ಬಗ್ಗೆ ಅಗ್ನಿಶಾಮಕ ದಳಕ್ಕೆ ಸ್ಥಳೀಯರು ತಕ್ಷಣ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ವಡಗೆರಾ ಠಾಣೆ ಪೊಲೀಸರು ಭೇಟಿ ನೀಡಿದ್ದು ಪರಿಶೀಲನೆ ನಡೆಸುತ್ತಿದ್ದಾರೆ.