×
Ad

ಯಾದಗಿರಿ | ಹೃದಯಾಘಾತದ ಬಗ್ಗೆ ಚಾಲಕರಲ್ಲಿ ಜಾಗೃತಿ ಮೂಡಿಸಿದ ಉಮೇಶ್ ಮುದ್ನಾಳ್

Update: 2025-07-12 18:30 IST

ಯಾದಗಿರಿ: ಸದಾ ಒತ್ತಡದಿಂದ ಇರುವ ಲಘು ವಾಹನ ಚಾಲಕರಿಗೆ ಹೃದಯಾಘಾತದ ಬಗ್ಗೆ ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಜಾಗೃತಿ ಮೂಡಿಸಿದರು.

ಯಾದಗಿರಿ ನಗರದ ಚಿತ್ತಾಪುರ ರಸ್ತೆಯಲ್ಲಿರುವ ಆಂಜನೇಯ ದೇವಸ್ಥಾನದಲ್ಲಿ ಆರೋಗ್ಯ ಕಾಳಜಿ ಬಗ್ಗೆ ಅರಿವು ಮೂಡಿಸಿದರು.

ಈ ಸಂದರ್ಭದಲ್ಲಿ ಗಿರಿನಾಡು ಕಾರು ಟ್ಯಾಕ್ಷಿ ಚಾಲಕರ ಸಂಘದ ತಾಲೂಕು ಅಧ್ಯಕ್ಷರಾಗಿ ಸಲೀಮ್ ಶೇಕ್, ಉಪಾಧ್ಯಕ್ಷರಾಗಿ ಪ್ರಭುಲಿಂಗ ಕರ್ಣಿಗಿ, ಜಿಲ್ಲಾ ಘಟಕದ ಸದಸ್ಯನಾಗಿ ಬಾಬಾ ಶೇಕ್ ಆಯ್ಕೆ ಮಾಡಲಾಯಿತು.

ಈ ವೇಳೆ ಬಸವರಾಜ್ ಇಟಿಗಿ, ನಾಗರೆಡ್ಡಿ ಹತ್ತಿಕುಣಿ, ಚಂದ್ರಶೇಖರ್ ತಂಬಾಕಿ, ನಾಗೇಂದ್ರಪ್ಪ ಯಾದಗಿರಿ, ಶರಣು ನಾರಾಯಣಪೇಟ್, ಶರಣು ಜೋತಾ, ಸಾಬಯ್ಯ ಗುತ್ತೇದಾರ,ಮೈಬೂಬ್,ಮಹೇಶ್ ಹೊಸಮನಿ, ಬೀರಪ್ಪ ಪೂಜಾರಿ,ಆಫ್ಸರ್ ಭೈ ,ಬನ್ನಪ್ಪ ಜತ್ತಿ, ವಿಶ್ವನಾಥ್ ಸ್ವಾಮಿ, ಸುನಿಲ್ ರಾಠೋಡ್, ದುರ್ಗಪ್ಪ,ತಾಯಪ್ಪ ಕೂಲೂರ್, ಕಾಡಪ್ಪ, ವೀರೇಶ್ ಗೌಡ,ಜಮಾಲ್, ವಿಜಯ್ ಕುಮಾರ್, ಬಾಬಾ, ಬನಶಂಕರ, ಶಿವರಾಜ್, ವೆಂಕಟರೆಡ್ಡಿ, ರಫೀಕ್, ಮಲ್ಲಿಕಾರ್ಜುನ, ಬಾಬು ಪಟೇಲ್, ನಬಿ, ಪಾಷಾ ಖಾನ್, ರಿಯಾಝ್‌, ಝಾಕೀರ್, ಕೃಷ್ಣ, ರವಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News