ಯಾದಗಿರಿ | ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು : ಸಿಇಓ ಲವೀಶ್ ಒರಡಿಯಾ
ಯಾದಗಿರಿ: ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕು ಎಂದು ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲವೀಶ್ ಒರಡಿಯಾ ಅವರು ಹೇಳಿದರು.
ಜೂ.17ರ ಮಂಗಳವಾರದಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾದಗಿರಿ ಜಿಲ್ಲೆಯಲ್ಲಿ ರಕ್ತ ಕೇಂದ್ರ ಆರಂಭವಾಗಿದ್ದು, ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಪ್ರೇರೆಪಿಸಿದರು. 2025ರ ಜೂನ್ 14 ರಂದು ವಿಶ್ವದ್ಯಾಂತ ರಕ್ತದಾನಿಗಳ ದಿವಸ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆ 2025ರ ಜೂನ್ 17 ರಂದು ಯಾದಗಿರಿ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆಯ ವೈದ್ಯ ವಿದ್ಯಾರ್ಥಿಗಳ ಪಾತ್ರ ಮುಖ್ಯವಾಗಿರುತ್ತದೆ ಎಂದು ಹೇಳಿದರು.
ಯಾದಗಿರಿ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಸಂಜೀವಕುಮಾರ ರಾಯಚೂರಕರ್, ಯಿಮ್ಸ್ ವೈದ್ಯಕೀಯ ನಿರ್ದೇಶಕರು ಡಾ.ಸಂದೀಪ ಹೆಚ್., ಯಾದಗಿರಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಹೇಶ ಪಾಟೀಲ್, ಯಾದಗಿರಿ ಯಿಮ್ಸ್ ರಕ್ತ ಕೇಂದ್ರ ವೈದ್ಯಕೀಯ ಅಧಿಕಾರಿ ಡಾ.ಸಿದ್ದಲಿಂಗರೆಡ್ಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಬಾರಿ ರಕ್ತದಾನ ಮಾಡಿದ ದಾನಿಗಳಾದ ಯಿಮ್ಸ್ ನಿರ್ದೇಶಕರು ಡಾ.ಸಂದೀಪ ಹೆಚ್. ಅವರು, ನಿಂಗಪ್ಪ ಜಡಿ, ಅಭಿಲಾಷ ಮತ್ತು ಸುಪ್ರೀತ ಇವರಿಗೆ ಸನ್ಮಾನಿಸಿ ಪ್ರಶಸ್ತಿ ಪತ್ರ ನೀಡಿದರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವತಿಯಿಂದ ರಕ್ತದಾನ ಶಿಬಿರದಲ್ಲಿ 34 ಜನ ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಯಾದಗಿರಿ ಯಿಮ್ಸ್ ಪ್ರಾಂಶುಪಾಲರು ಡಾ.ನವಾಝ್ ಉಮರ್, ಯಾದಗಿರಿ ಯಿಮ್ಸ್ ಹಣಕಾಸು ಸಲಹೆಗಾರರು ಕಾಶಿನಾಥ ಜಿಲ್ಲಾ ಶಾಸ್ತ್ರ ಚಿಕಿತ್ಸಕರು ಡಾ.ರಿಜ್ವಾನಾ ಆಫ್ರೀನ್, ಡಾ.ಮಾನಸಾ ದಾಸ, ಡಾ.ಶಿವಕುಮಾರ, ಡಾ.ಮಲ್ಲಪ್ಪ, ಡಾ.ಪದ್ಮಾನಂದ ಗಾಯಕವಾಡ್, ಡಾ.ಹಣಮಂತರೆಡ್ಡಿ, ಯಿಮ್ಸ್ ಭೋದಕ ಸಿಬ್ಬಂದಿ, ಜಿಲ್ಲಾ ಯರೋಗ ಘಟಕದ ಸಿಬ್ಬಂದಿಗಳು, ಎಲ್ಲಾ ವೈದ್ಯಕೀಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.