ಮಸ್ಕತ್: ಹೊರದೇಶದಲ್ಲಿ ನೆಲೆಸಿರುವ ಕನ್ನಡಿಗರ ಧ್ವನಿಯಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕನ್ನಡ ನಾಡು-ನುಡಿಯ ಸೇವೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿರುವ 'ವಾರ್ತಾಭಾರತಿ' ಪತ್ರಿಕೆಯ 24ನೇ ವರ್ಷಾರಂಭದ ಈ ಸಂಭ್ರಮದ ಸಂದರ್ಭದಲ್ಲಿ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು.

ಅನಿವಾಸಿ ಭಾರತೀಯರಾದ ನಮ್ಮಂತಹ ಕನ್ನಡಿಗರಿಗೆ ಈ ಪತ್ರಿಕೆ ಸದಾ ಬೆಂಬಲವಾಗಿ ನಿಂತಿದ್ದು, ಹೊರದೇಶದಲ್ಲಿ ಕನ್ನಡಿಗರು ನಡೆಸುವ ಸಾಂಸ್ಕೃತಿಕ ಕಾರ್ಯಕ್ರಮಗಳು, ಮಕ್ಕಳಿಗೆ ಕನ್ನಡ ಕಲಿಸುವ ಪ್ರಯತ್ನಗಳು, ನಾಡಿನ ಹಬ್ಬಗಳ ಆಚರಣೆಗಳು ಹಾಗೂ ಅನಿವಾಸಿ ಕನ್ನಡಿಗರ ಸಮಸ್ಯೆಗಳು ಮತ್ತು ಸಾಧನೆಗಳಿಗೆ ವಿಶೇಷ ಪ್ರಾಮುಖ್ಯತೆ ನೀಡಿ ಸಮಾಜದೊಂದಿಗೆ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಅನಿವಾಸಿ ಭಾರತೀಯರ ಎಲ್ಲ ವಿಷಯಗಳ ಕುರಿತು ನಿರಂತರವಾಗಿ ಸ್ಪಂದಿಸುವ ವಾರ್ತಾಭಾರತಿ ಪತ್ರಿಕೆ ಕನ್ನಡಿಗರಿಗೆ ಅತ್ಯಂತ ಅನುಕೂಲಕರ ಮತ್ತು ಆತ್ಮೀಯ ಮಾಧ್ಯಮವೆಂದು ನಾವು ಹೆಮ್ಮೆಯಿಂದ ಹೇಳುತ್ತೇವೆ.

ವಾರ್ತಾಭಾರತಿ ಪತ್ರಿಕೆಯು ಇನ್ನಷ್ಟು ಯಶಸ್ಸು, ಜನಮನ್ನಣೆ ಹಾಗೂ ಪ್ರಗತಿಯನ್ನು ಸಾಧಿಸಲಿ ಎಂದು ಹಾರೈಸುತ್ತೇನೆ. ಶುಭವಾಗಲಿ...

-ಮಂಜುನಾಥ ಸಂಗಟಿ, ಅಧ್ಯಕ್ಷರು ಮಸ್ಕತ್ ಕನ್ನಡ ಸಂಘ, ಒಮಾನ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor