×
Ad

ಎರಡು ದ್ವಿಚಕ್ರ ವಾಹನ ಕಳವು: ದೂರು ದಾಖಲು

Update: 2025-09-13 19:39 IST

ಮಂಗಳೂರು, ಸೆ.13:ನಗರದಲ್ಲಿ ಎರಡು ದ್ವಿಚಕ್ರ ವಾಹನಗಳು ಕಳವಾಗಿರುವ ಬಗ್ಗೆ ಬಂದರು ಮತ್ತು ಕಾವೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕೆಎ 19 ಇಎಸ್ 6003 ನೋಂದಣಿಯ ಸ್ಕೂಟರನ್ನು ತಿಂಗಳ ಹಿಂದ ಉದಯ ಶೆಟ್ಟಿಗಾರ್ ಎಂಬವರಿಗೆ ತಾನು ಮಾರಾಟ ಮಾಡಿದ್ದೆ. ಅವರು ಅದನ್ನು ಉಪಯೋಗಿಸುತ್ತಿದ್ದರು. ಸೆ.10ರಂದು ಮನೆಯಿಂದ ಬೆಳಗ್ಗೆ ಕೇಂದ್ರ ಮಾರುಕಟ್ಟೆಗೆ ಬಂದಿದ್ದ ಉದಯ ಶೆಟ್ಟಿಗಾರ್ ಕೀ ಸಹಿತ ಸ್ಕೂಟರನ್ನು ನಿಲ್ಲಿಸಿ ತರಕಾರಿ ತರಲು ಹೋಗಿದ್ದರು. ಮರಳಿ ಬಂದಾಗ ಸ್ಕೂಟರ್ ಕಳವಾಗಿತ್ತು ಎಂದು ವಿನಾಯಕ ಎಂಬವರು ಬಂದರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

*ಕಾವೂರು ಗುಡ್ಡೆಯಂಗಡಿ ಪಡುಕೋಡಿ ಎಂಬಲ್ಲಿ ರಸ್ತೆ ಬದಿ ನಿಲ್ಲಿಸಿದ್ದ ಯಮಹಾ ಎಫ್‌ಝೀ ಬೈಕ್ ಕಳವಾಗಿದೆ ಎಂದು ಮುಹಮ್ಮದ್ ರಿಯಾಝ್ ಕಾವೂರು ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕೆಎ 20 ಇಇ 9449 ನೋಂದಣಿಯ ಬೈಕ್‌ನ್ನು 2013ರಲ್ಲಿ ಹೊರದೇಶಕ್ಕೆ ಹೋಗುವಾಗ ಅತ್ತೆಯ ಮಗ ಮುಹಮ್ಮದ್ ಹುಸೇನ್ ಸಿಮಾಖ್ ಎಂಬಾತನಿಗೆ ಚಲಾಯಿಸಲು ಕೊಟ್ಟಿದ್ದೆ. 2025ರ ಎ.25ರಂದು ಹುಸೇನ್ ಕರೆ ಮಾಡಿ ಮನೆ ಬಳಿ ಪಾರ್ಕ್ ಮಾಡಿದ್ದ ಬೈಕ್ ಕಳವಾಗಿದೆ ಎಂದು ತಿಳಿಸಿದ್ದು, ಬಳಿಕ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ ಎಂದು ವಿದೇಶದಿಂದ ದೂರು ನೀಡಿರುವ ರಿಯಾಝ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News