ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಮಂಗಳೂರು ದಕ್ಷಿಣ ವಲಯ ಹಾಗೂ ಫಲಾಹ್ ವಿದ್ಯಾಸಂಸ್ಥೆ, ವಿದ್ಯಾನಗರ ತಲಪಾಡಿ ಉಳ್ಳಾಲ ಇವುಗಳ ಸಹ ಭಾಗಿತ್ವದಲ್ಲಿ ಮಂಗಳೂರು ದಕ್ಷಿಣ ವಲಯದ ತಾಲೂಕು ಮಟ್ಟದ ಹ್ಯಾಂಡ್ ಬಾಲ್ ಪಂದ್ಯಾಟ ಬುಧವಾರ ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ನಡೆಯಿತು.
ಅಧ್ಯಕ್ಷ ಯು.ಬಿ ಮುಹಮ್ಮದ್ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್ ಉದ್ಘಾಟಿಸಿದರು.
ಇದೇ ಸಂದರ್ಭ ಉದಯ್ ಕುಮಾರ್ ಹಾಗೂ ಅಬ್ಬಾಸ್ ಪೋಕರ್ ಉಚ್ಚಿಲ ನೂತನ ಕಂಪ್ಯೂಟರ್ ಕೊಠಡಿಯನ್ನು ಉದ್ಘಾಟಿಸಿದರು.
ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಇಸ್ಮಾಯೀಲ್ ಟಿ ಶುಭ ಹಾರೈಸಿದರು. ಫಲಾಹ್ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಹಾಜಿ ಅರಬಿ ಕುಂಞಿ , ಕೋಶಾಧಿಕಾರಿ ಕೆ ಎಂ ಅಬ್ಬಾಸ್ ಮಜಲ್,ಸದಸ್ಯ ರಹೀಂ ಉಚ್ಚಿಲ್, ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಲಿಲ್ಲಿ ಪಾಯಿಸ್ , ಕಿಶೋರಿ ಕೆ, ಮೋಹನ್ ಶಿರ್ಲಾಲ್, ರಾಧಾ ಕೃಷ್ಣ ರೈ, ರಾಜೀವ್ ನಾಯ್ಕ್, ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಮಹಮ್ಮದ್ ರಫೀಕ್, ಆಂಗ್ಲ ಮಾಧ್ಯಮ ಮುಖ್ಯ ಶಿಕ್ಷಕಿ ಗೀತಾಂಜಲಿ, ಫಲಾಹ್ ಕಾಲೇಜಿನ ಪ್ರಾಂಶುಪಾಲೆ ರೇವತಿ ಎನ್ ರೈ, ಹಿರಿಯ ಶಿಕ್ಷಕಿ ಲತಾ ಶೆಟ್ಟಿ, ಐರಿನ್ ರೋಡ್ರಿಗಸ್, ಸಾಧನಾ ರಾವ್ , ರಮೇಶ್ , ಅಬ್ದುಲ್ ನಾಸೀರ್ ಉಪಸ್ಥಿತರಿದ್ದರು.
ಚಂದ್ರಕಲಾ ಮತ್ತು ವನಿತಾ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ಲತಾ ಎಸ್ ಸ್ವಾಗತಿಸಿ, ಶಿಕ್ಷಕಿ ದೀಕ್ಷಾ ವಂದಿಸಿದರು.