ಗಾಂಜಾ ಸೇವನೆ ಪ್ರಕರಣ: ಮೂವರು ಆರೋಪಿಗಳ ಬಂಧನ
ಮಂಗಳೂರು, ಅ.2: ಸಿಗರೇಟ್‌ನಲ್ಲಿ ಗಾಂಜಾ ಬೆರೆಸಿ ಸೇವಿಸುತ್ತಿದ್ದ ಆರೋಪದ ಮೇರೆಗೆ ಕಾಸರಗೋಡು ಜಿಲ್ಲೆಯ ಮುಳಿಯಾರ್ ಪೊವ್ವಲ್ ನಿವಾಸಿ ಮುಹಮ್ಮದ್ ಫಾಝಿಲ್ ಫಿರೋಝ್ ಪಿ.ಸಿ. (23) ಎಂಬಾತನನ್ನು ಉರ್ವ ಠಾಣೆಯ ಪೊಲೀಸರು ಬಿಜೈ ಕಾಪಿಕಾಡಿನಲ್ಲಿ ಬಂಧಿಸಿದ್ದಾರೆ.
*ನಗರದ ದಂಬೆಲ್ ನದಿ ಕಿನಾರೆ ರಸ್ತೆಯ ಫಲ್ಗುಣಿ ಸೇತುವೆ ಬಳಿ ಗಾಂಜಾ ಹಿಡಿದುಕೊಂಡು ಬರುತ್ತಿದ್ದ ಬಿಹಾರ ರಾಜ್ಯದ ಪೂರ್ಣಿಯಾ ಹರಿಪುರ್ ಗ್ರಾಮದ ನಿವಾಸಿ, ಪ್ರಸಕ್ತ ಕೂಳೂರು ರಾಯಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೃಷ್ಣ ಕುಮಾರ್ (20), ಗದಗ ಜಿಲ್ಲೆ ಶಿರಹಟ್ಟಿ ತಾಲೂಕು ಯಳವತ್ತಿ ಗ್ರಾಮ ನಿವಾಸಿ, ಪಡೀಲ್ ಕೊಡಕ್ಕಲ್‌ನಲ್ಲಿ ವಾಸವಾಗಿರುವ ಬಸಯ್ಯ ಶಂಕರಯ್ಯ ಮಠಪತಿ (23) ಎಂಬವರನ್ನು ಉರ್ವ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಅಂದಾಜು 20,200 ರೂ. ಮೌಲ್ಯದ 1 ಕೆ.ಜಿ. 364 ಗ್ರಾಂ. ಗಾಂಜಾ, ಎರಡು ಮೊಬೈಲ್, 13 ಖಾಲಿ ಜಿಪ್ ಕವರ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.