×
Ad

ಎನ್‌ಐಟಿಕೆ: ತುರ್ತು ಸಂದರ್ಭ ಕೈಗೊಳ್ಳಬೇಕಾದ ಕ್ರಮಗಳ ಅಣುಕು ಪ್ರದರ್ಶನ

Update: 2025-10-08 19:08 IST

ಸುರತ್ಕಲ್‌: ವಿಮಾನಯಾನ ಸಂಸ್ಥೆಗಳಿಗೆ ಪಟ್ರೋಲಿಯಂ ಸಾಗಾಟ ಮಾಡುವ ಶೆಲ್ ಎಂಆರ್ಪಿಎಲ್ ಕುತ್ತೆತ್ತೂರು ಸಂಸ್ಥೆಯ ವತಿಯಿಂದ ಇಂಧನ ಸಾಗಾಟದ ಸಂದರ್ಭ ನಡೆಯಬಹುದಾದ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಷ್ಟ್ರೀಯ ಹೆದ್ದಾರಿ 66ರ ಎನ್‌ಐಟಿಕೆ ಬಳಿ ಬುಧವಾರ ಅಣುಕು ಪ್ರದರ್ಶನ ನಡೆಯಿತು.

ಈ ವೇಳೆ ‌ಟ್ರೋಲಿಯಂ ಉತ್ಪನ್ನಗಳು ಸಾಗಾಟ ಮಾಡುತ್ತಿದ್ದ ವೇಳೆ ತಾಂತ್ರಿಕ ದೋಷಗಳು ಕಂಡುಬಂದಾಗ ಒಂದು ವಾಹನದಿಂದ ಇನ್ನೊಂದು ವಾಹನಕ್ಕೆ ಇಂಧನವನ್ನು ಸ್ಥಳಾಂತರಿಸುವ ಮತ್ತು ಅಪಘಾತ ನಡೆದ ಸಮಯಗಳಲ್ಲಿ ಕೈಗೊಳಬೇಕಾದ ಕ್ರಮಗಳು, ಈ ವೇಳೆ ಅಸ್ವಸ್ಥರಾಗಿರುವ ಚಾಲಕರು ನಿರ್ವಾಹಕರ ರಕ್ಷಣೆ ಮಾಡುವ ಕುರಿತು ಅಣುಕು ಪ್ರದರ್ಶನದಲ್ಲಿ ಮಾಹಿತಿ ನೀಡಲಾಯಿತು.

ಈ ಸಂದರ್ಭ ಶೆಲ್ ಮ್ಯಾನೇಜರ್ ಶ್ರೀನಿವಾಸ ಕುಳಾಯಿ, ಶಿವ ಕೋಟೇಶ್ವರ, ಜೋಸೆಫ್‌ ಪಿರೇರಾ, ಅರುಣ್ ರಾಜ್, ಟ್ರಾನ್ಸ್‌ ಪೋಟರ್‌ ಗಳಾದ ರಾಜೇಶ್ ಕೊಟ್ಟಾರಿ, ಭಕ್ತೇಶ್, ಕುಮಾರಣ್‌, ಮುರಳಿ, ಬಾಲಚಂದ್ರ, ರವೀಂದ್ರ ಹಾಗೂ ಸುರತ್ಕಲ್‌ ಪೊಲೀಸರು, ಎಂಆರ್ಪಿಎಲ್‌ ಅಗ್ನಿ ಶಾಮಕ ದಳ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News